ಇಂಡಿ: ರಾಜ್ಯ ಸರಕಾರ ಜನ ವಿರೋಧಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ತಾಲೂಕಿನ ರೈತರು ಬೆಳೆಗೆ ನೀರು ಪೂರೈಸಲು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆಗೆ ಅದನ್ನು ಕಳುಹಿಸುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಎಟಿಎಂ ಆಗಿದೆ. ರಸ್ತೆಗಳು ಹಾಳಾಗಿವೆ ಎಂದರು.
ಇಂಡಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ, ಐಟಿ ದಾಳಿ ಮಾಡಿದಾಗ ಗುತ್ತಿಗೆದಾರರ ಮನೆಯಲ್ಲಿ ೪೦ ಕೋಟಿ ಹಣ ಸಿಕ್ಕಿದೆ. ಕಾಂಗ್ರೆಸಕ್ಕೂ ಇದಕ್ಕೂ ಸಂಬಂಧವಿದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇವರ ಪ್ರತಿಕೃತಿ ದಹನ ಮಾಡಿದರು.
ಮುಖಂಡರಾದ ರಾಜ್ಯ ಒಬಿಸಿ ಮೋರ್ಚಾದ ಶೀಲವಂತ ಉಮರಾಣಿ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸಿದ್ದಲಿಂಗ ಹಂಜಗಿ, ಬಾಳು ಮುಳಜಿ, ಅನೀಲ ಜಮಾದಾರ, ಸೋಮು ನಿಂಬರಗಿಮಠ, ಮಲ್ಲಿಕಾರ್ಜುನ ಸಗಾಯ, ಶಾಂತಪ್ಪ ಕಂಬಾರ,ಅಶೋಕ ಅಕಲಾದಿ, ರವಿ ವಗ್ಗೆ , ರಮೇಶ ಧರೆಣ್ಣನವರ, ರಾಚು ಬಡಿಗೇರ, ಮಲ್ಲು ವಾಲಿಕಾರ, ಸುನಂದಾ ಗಿರಣಿವಡ್ಡರ, ಮತ್ತಿತರಿದ್ದರು.
Related Posts
Add A Comment