ಬಸವನ ಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಭಾನುವಾರ ನವರಾತ್ರಿ ಉತ್ಸವದಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವ ಮೂಲಕ ನವರಾತ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.
ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಪುರಸಭೆ ಮಾಜಿ ಸದಸ್ಯ ಅಂಬೋಜಿ ಪವಾರ ಅವರು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ದೇವಸ್ಥಾನ ಅರ್ಚಕ ಚಿದಾನಂದ ಹಿರೇಮಠ ಇತರರು ಇದ್ದರು.
ನಂತರ ದೇವಸ್ಥಾನದಿಂದ ಡೊಳ್ಳಿನ ಮೇಳ, ಸುಮಂಗಲೆಯರ ಆರತಿಯೊಂದಿಗೆ ಅಂಬಾಭವಾನಿ ದೇವಿಯ ಉತ್ಸವ ಮೂರ್ತಿ ಹಾಗೂ ಪ್ರತಿಷ್ಠಾಪನೆ ಮಾಡುವ ದೇವಿಯ ಮೂರ್ತಿ, ಶಿವಾಜಿ, ಬಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಅಂಬಾಭವಾನಿಯ ಪಲ್ಲಕ್ಕಿಯು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿತು.
ಪಲ್ಲಕ್ಕಿ ಉತ್ಸವದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಯಮನೂರಿ ಬಿದರಕುಂದಿ, ಬಸವರಾಜ ಬಿಜಾಪುರ, ಶಿವಾಜಿ ಜಗತಾಪ, ಶಿವಾನಂದ ಚವ್ಹಾಣ, ಮಾರುತಿ ಘಾಟಗೆ, ಜೋತಿಬಾ ಪವಾರ, ಬಾಬು ನಿಕ್ಕಂ, ಜಗು ಬಿಜಾಪುರ, ಅಮರ ಗಾಯಕವಾಡ, ಶಿವಾನಂದ ರಜಪೂತ, ರಮೇಶ ಮೋರೆ, ದಾವಾಜಿ ಜಾಧವ, ಅಶೋಕ ಬಿಜಾಪುರ, ಭೀಮಜಿ ಶಿಂಧೆ, ಅಕ್ಕಮ್ಮ ಕಂದಂ, ಅಂಬಾ ಬಿಜಾಪುರ, ಮೈನಾವತಿ ಬಿಜಾಪುರ, ದೇವಕ್ಕ ಬಿಜಾಪುರ, ಶಕುಂತಲಾ ಬಿಜಾಪುರ, ಚಂದ್ರಾಬಾಯಿ ಶಿಂಧೆ, ಶೋಭಾ ಜಗತಾಪ, ಮಿತ್ರವ್ವ ಬಿದರಕುಂದಿ, ದೀಪಾ ಘಾಟಗೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

