ಮೋರಟಗಿ: ಚುನಾವಣೆ ಪೂರ್ವದಲ್ಲಿ ಗ್ರಾಮೀಣ ಭಾಗದ ಜನತೆಗೆ ಕೊಟ್ಟ ಭರವಸೆಗಳನ್ನು ಹಂತ ಹಂತವಾಗಿ ಇಡೇರಿಸುವುರ ಜೊತೆಗೆ ಸರಕಾರದ ಸೌಲಭ್ಯಗಳನ್ನು ತಮ್ಮ ಮನರ ಬಾಗಿಲಿಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸಾರ್ವಜನಿಕರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಸಮೀಪದ ಹಂಚಿನಾಳ ಗ್ರಾಮದಲ್ಲಿ ೨೦೨೨-೨೩ನೇ ಸಾಲಿನ ಜಲಜೀವನ್ ಮಷೀನ್ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ೭೧.೨೯ಲಕ್ಷರೂ ನಲ್ಲಿ ಸಂಪರ್ಕ ಯೋಜನೆ ಹಾಗೂ ೨೦೨೯-೨೦ನೇ ಸಾಲಿನ ಶಾಸಕರ ಪ್ರದೇಶಾಭಿವ್ರದ್ದಿ ಯೋಜನೆಯ ೩ ಲಕ್ಷ ಅನುದಾನದ ಅಡಿಯಲ್ಲಿ ಶ್ರೀಮರಗಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೀರು ಪ್ರತಿಯೊಂದು ಪ್ರಾಣಿಗಳಿಗೂ, ಮನುಷ್ಯನಿಗೂ, ಹಾಗೂ ಮಳೆರಾಯ ಧರೆಗೆ ಇಳಿಯದ ಪರಿಸ್ಥಿತಿಯಲ್ಲಿ ಹೊಲದಲ್ಲಿರುವ ಬೆಳೆಗಳಿಗೂ, ಅತೀ ಅವಶ್ಯವಿರುವಂತದ್ದು. ಜಲಹಾನಿಯಾಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರ ಇವತ್ತು ರಾಜ್ಯಾದಂತ ಜನಜೀವನ್ ಮಷೀನ್ ಯೋಜನೆಯ ಅಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಗಳನ್ನು ಹಮ್ಮಿಕೊಂಡಿದೆ. ಗ್ರಾಮದ ಹಿರಿಯರು ಯುವಕರು ಗುತ್ತಿಗೆದಾರರಿಗೆ ಸಹಕಾರ ನೀಡಿ ಸರಕಾರದ ಯೋಜನೆಗಳು ದುರ್ಬಳಕೆಯಾಗದಂತೆ ನಿಗಾ ವಹಿಸಬೇಕು. ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನತೆಯ ಅಭಿವೃದ್ದಿಯ ಆಸೆ ನಿರಾಸೆಯಾಗದಂತೆ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಅಭಿವೃದ್ದಿ ಪಡಿಸುತ್ತೇನೆ ಎಂದು ಅಭಿಮತ ವ್ಯಕ್ತಪಡಿಸಿದರು.
ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯ ಎನ್ ಆರ್ ತಿವಾರಿ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಇಂಜನಿಯರ್ ಅಶೋಕ ಪಾಟೀಲ್, ರವಿಕಾಂತ ನಡುವಿನಕೇರಿ, ತಾಲೂಕ ಭೂನ್ಯಾಯ ಮಂಡಳಿಯ ಸದಸ್ಯ ಧರ್ಮರಾಜ ಯಂಟಮಾನ್, ಸುನಂದ ಯಂಪೂರೆ, ಗ್ರಾ.ಪಂ.ಸದಸ್ಯರಾದ ಸಿ.ಎಸ್.ದುದ್ದಗಿ, ಎಸ್.ಎಂ.ನಗನೂರ, ಎಂ.ಎಸ್.ದುದ್ದಗಿ, ಎನ್ ಎನ್ ಪಾಟೀಲ, ಸಿ.ಎಸ್.ಪಾಟೀಲ್, ಆರ್.ಎಂ.ನಾಟೀಕಾರ, ಬಿ.ಎಸ್.ಯಂಕಂಚಿ, ಬಿ.ಆರ್.ನಾಟೀಕಾರ ಸೇರಿದಂತೆ ಇತರರು ಇದ್ದರು.
Related Posts
Add A Comment