ದೇವರಹಿಪ್ಪರಗಿ: ಬೀದಿ ಬೆಳಗುವ ದೀಪಗಳು ಹಲವು ದಿನಗಳಿಂದ ಕಾರ್ಯನಿರ್ವಹಿಸದೇ ಇದ್ದು, ಪಾದಯಾತ್ರಿಗಳ ಅನುಕೂಲಕ್ಕಾಗಿ ಕೂಡಲೇ ಬೀದಿದೀಪಗಳನ್ನು ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ವೃತ್ತದ ಹೈಮಾಸ್ಕ್ ದೀಪ ಸೇರಿದಂತೆ ಇಂಡಿ ರಸ್ತೆಯಲ್ಲಿನ ಕ.ರ.ವೇ ವೃತ್ತದವರೆಗೆ ಬೀದಿ ದೀಪಗಳು ಕಳೆದ ಹಲವು ದಿನಗಳಿಂದ ಬಂದಾಗಿವೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಗುಡಿಮನಿ ಅಸಮಾಧಾನ ವ್ಯಕ್ತಪಡಿಸಿ, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ದಿ:೧೪ ಅಕ್ಟೋಬರ್ ದಂದು ೧೦ ಲಕ್ಷ ಜನರೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ದಿನವಾಗಿದೆ. ಆದರೆ ಇಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ ಆವರಣದಲ್ಲಿಯೇ ಕತ್ತಲೇ ಆವರಿಸಿ ಬೆಳಕು ಇರದಂತಾಗಿದೆ. ಇಲ್ಲಿನ ಹೈಮಾಸ್ಕ್ ದೀಪ ಹಲವಾರು ದಿನಗಳಿಂದ ಸರಿಯಾಗಿ ಬೆಳಗುತ್ತಿಲ್ಲ. ಒಂದು ದಿನ ದಿನ ಇದ್ದರೆ ಮೂರು ದಿನ ಬಂದಾಗುತ್ತದೆ. ಜೊತೆಗೆ ಇಂಡಿ ರಸ್ತೆಯಲ್ಲಿನ ಬಹುತೇಕ ಬೀದಿದೀಪ ಬಂದಾಗಿವೆ. ಈ ಬಗ್ಗೆ ಅಧಿಕಾರಿಗಳು ವಾರದ ಹಿಂದೆಯೇ ಗಮನ ಸೆಳೆಯಲಾಗಿದೆ. ಆದರೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಹೈಮಾಸ್ಕ್ ಹಾಗೂ ಬೀದಿ ದೀಪಗಳನ್ನು ಬೆಳಗಿಸಲು ಕ್ರಮವಹಿಸಲು ಅಂಬೇಡ್ಕರ್ ಸಮಾಜ ಸುಧಾರಣಾ ಸಮೀತಿಯ ಅಧ್ಯಕ್ಷ ಕಾಶೀನಾಥ ತಳಕೇರಿ, ಜೆಡಿಎಸ್ ಧುರೀಣ ರಾಘವೇಂದ್ರ ಗುಡಿಮನಿ, ಪ್ರಭು ಅಂಬಲಗಿ, ಜಾನು ಗುಡಿಮನಿ ಆಗ್ರಹಿಸಿದ್ದಾರೆ.
Related Posts
Add A Comment