ಮುದ್ದೇಬಿಹಾಳ: ವಿಜಯಪುರದಲ್ಲಿ ನಡೆದ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಲಮಾಣಿ ೧೦೦ ಮೀ ಓಟದ ಸ್ಪರ್ಧೆಯಲ್ಲಿ ಹಾಗೂ ಶಾರ್ಟ್ ಪುಟ್ ಸ್ಪರ್ಧೆಯಲ್ಲಿ ವಿಜೇತನಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಗುಂಡು ಎಸೆತದಲ್ಲಿ -ಪ್ರಥಮ, ೧೦೦ಮೀ ಓಟದಲ್ಲಿ- ದ್ವಿತೀಯ, ಲಾಂಗ್ ಜಂಪ್ – ದ್ವಿತೀಯ ಸ್ಥಾನಗಳನ್ನು ಗಿಟ್ಟಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲೆಯ ದೈಹಿಕ ಶಿಕ್ಷಕ ಬಿ.ಕೆ.ಲಮಾಣಿ ಹಾಗೂ ಎನ್.ಎಸ್.ಬಿರಾದಾರ್, ಮುಖ್ಯ ಗುರುಮಾತೆ ಎನ್.ಬಿ.ತೆಗ್ಗಿನಮಠ ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಗುಂಡಪ್ಪ ಕೊಟಗಿ, ರಾಜ್ಯದಲ್ಲಿಯೂ ಪ್ರಜ್ವಲ್ ಮಿಂಚುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
Related Posts
Add A Comment