ಮುದ್ದೇಬಿಹಾಳ: ತಾಲೂಕಿನ ಯರಝರಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದಲ್ಲಿ ನವರಾತ್ರೋತ್ಸವದ ಅಂಗವಾಗಿ ಅ.೧೫ ರಿಂದ ಅ.೨೭ ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ದೇವಿಯ ಮಹಾಪೂಜೆ, ಕುಂಕುಮಾರ್ಚನೆ ಹಾಗೂ ದೇವಿಯ ಪಾರಾಯಣ ಅತ್ಯಂತ ವೈಭವದಿಂದ ನಡೆಯುವದು. ಅ೨೬ ರಂದು ನಸುಕಿನ ಜಾವ ೩ಗಂಟೆಗೆ ಮಠದಿಂದ ಪರಮಾನಂದರ ಉತ್ಸವದೊಂದಿಗೆ ಖಾದರಲಿಂಗ ದರ್ಗಾಕ್ಕೆ ಗಂಧ ಹೊರವದು. ನಂತರ ಖಾದರಲಿಂಗರ ಉರುಸು ನಡೆಯುವದು. ಅದೇ ದಿನ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ಮತ್ತು ರಾತ್ರಿ ೧೦ಕ್ಕೆ ಗ್ರಾಮದ ಯಲ್ಲಾಲಿಂಗ ನಗರದ ರಾಜರಾಜೇಶ್ವರಿ ತರುಣ ನಾಟ್ಯ ಸಂಘದಿಂದ ’ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ’ ನಾಟಕ ಪ್ರದರ್ಶಿಸಲಿದ್ದಾರೆ. ೨೭ರಂದು ಬೆ.೧೧ ಕ್ಕೆ ಸಾಮೂಹಿಕ ವಿವಾಹ ಹಾಗೂ ಮಲ್ಲಾರಲಿಂಗ ಪ್ರಭುಗಳ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಸದ್ಭಕ್ತರು ಆಗಮಿಸಿ ದೇವಿಯ ಹಾಗೂ ಪೂಜ್ಯರ ಆಶೀರ್ವಾದ ಪಡೆದುಕೊಲ್ಳುವಂತೆ ಪ್ರಕಟಣೆ ತಿಳಿಸಿದೆ.
ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ನ ಪ್ರವೇಶ ಫೀ ೩೦೧ ರೂ. ನಿಗದಿಪಡಿಸಿದ್ದು, ಪ್ರಥಮ ಬಹುಮಾನ ೧೦.೦೦೧/-, ದ್ವಿತೀಯ ೭,೦೦೧/-, ತೃತೀಯ ೫,೦೦೧/- ಹಾಗೂ ನಾಲ್ಕನೆ ಬಹುಮಾನ ೩,೦೦೧/- ಮತ್ತು ಪ್ರತಿ ಬಹುಮಾನಕ್ಕೊಂದು ಟ್ರೋಫಿ ನೀಡುತ್ತಿದ್ದಾರೆ. ಆಸಕ್ತರು ಮೊ: ೭೦೨೬೪೪೪೩೭೨, ೮೯೭೦೧೮೯೮೧೮, ೮೧೯೭೦೦೩೧೮೧ ಮತ್ತು ೮೭೪೬೯೩೪೫೦೭ ಗೆ ಸಂಪರ್ಕಿಸಬಹುದು.