ಹಾವಿನಾಳ ಇಂಡಿಯನ್ ಶುಗರ್ಸ್ ಕಾರ್ಖಾನೆ ಮಾಲೀಕರ ವಿರುದ್ಧ ಆರೋಪ
ಚಡಚಣ: ಸಮೀಪದ ಹಾವಿನಾಳ ಇಂಡಿಯನ್ ಶುಗರ್ಸ್ ಕಾರ್ಖಾನೆಯ ಮಾಲಿಕರು ಕಾರ್ಮಿಕ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿರುವ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೆಆರೆಸ್ ಪಾರ್ಟಿ ಆಗ್ರಹಿಸಿದೆ.
ಕಾರ್ಮಿಕರು ಅಗತ್ಯತೆ ಮತ್ತು ಬಾಕಿ ವೇತನ ಸೇರಿದಂತೆ ಇತರ ಸಮಸ್ಯೆಗಳಿಗೆ ಆಗರವಾಗಿರುವ ಈ ಕಾರ್ಖಾನೆಯಿಂದ ಕಾರ್ಮಿಕರ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರು ತಮ್ಮ ಮುಷ್ಕರ ಹಿಂದಕ್ಕೆ ಪಡೆಯದಿದ್ದರೆ ನೀರು, ವಸತಿ, ವಿದ್ಯುತ್ ಮುಂತಾದ ಸೌಲಭ್ಯವನ್ನು ಕಡಿತಗೊಳಿಸುವ ಬೆದರಿಕೆ ಒಡ್ಡಿ ಮುಷ್ಕರವನ್ನು ಕೈ ಬಿಡುವಂತೆ ಒತ್ತಾಯ ಮಾಡಿರುವ ಮತ್ತು ಕಾರ್ಮಿಕ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡಿರುವ ಈ ಕಾರ್ಖಾನೆಯ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮತ್ತು ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಲು ಆಗ್ರಹಿಸಿ ಕೆ.ಆರ್.ಎಸ್ ಪಕ್ಷದಿಂದ ಚಡಚಣ ತಹಶಿಲ್ದಾರರಿಗೆ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ್ ಇಂಗಳಗಿ, ಹಮೀದ ಇಮಾನ್ದಾರ, ವಿಕ್ರಮ ವಾಗ್ಮೋರೆ ಸೇರಿದಂತೆ ಕಾರ್ಯಕರ್ತರಿದ್ದರು.