ಢವಳಗಿ: ಸಮೀಪದ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅ.14 ಶನಿವಾರದಂದು ರಾಷ್ಟ್ರೀಯ ರೋಗವಾಹಕ ಮತ್ತು ರೋಗಿಗಳ ನಿರ್ಮೂಲನೆಯ ಅಂಗವಾಗಿ ಮಲೇರಿಯಾ, ಡೆಂಗಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಡೆಂಗಿ ಜಾಗೃತಿ ರಥ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಡಾ.ಈರಣ್ಣ ಬಾಡಗಿಂಡಿ ಮಾತನಾಡಿ, ಸಾಮಾನ್ಯವಾಗಿ ಸಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚಾಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕನ್ ಗುನ್ಯಾ, ಮೆದುಳುಜ್ವರದಂತಹ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಯಾಕೆಂದರೆ ಈ ಸಾಂಕ್ರಾಮಿಕ ರೋಗಗಳು ಕೊಳಚೆ ಪ್ರದೇಶದಲ್ಲಿರುವ ಗಲೀಜು ನೀರಿನಿಂದ ಉತ್ಪತ್ತಿಯಾದ ಸೊಳ್ಳೆಗಳಿಂದ ಮತ್ತು ಮನೆಯಲ್ಲಿ ವಾರಗಟ್ಟಲೆ ಸಂಗ್ರಹಿಸಿದ ನೀರಿನಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಯಿಂದ ಇಂತಹ ರೋಗಗಳು ಬರುವುದು ಸಹಜ. ಅದಕ್ಕಾಗಿ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತ ಮುತ್ತ ಇದ್ದಂತಹ ಗಲಿಜು, ಕೊಳಚೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಮತ್ತು ನಿಮ್ಮ ಮನೆಯಲ್ಲಿ ನೀರನ್ನು ವಾರಗಟ್ಟಲೆ ಸಂಗ್ರಹಿಸಿಡಬಾರದೆಂದು ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯ ಸಿಬ್ಬಂದಿ ರುದ್ರವಾಡಿ, ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ ಮತ್ತು ದಶವಂತ ಸಾವಳ್ಕಾರ, ಘನಮಠೇಶ ಬೆನ್ನೂರ ಮಠ ಮತ್ತು ಆಶಾ ಕಾರ್ಯಕರ್ತರು ಇದ್ದರು.
Related Posts
Add A Comment