ಕೊಲ್ಹಾರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ನಿರ್ಣಯ ತೆಗೆದುಕೊಂಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ನೀರಾವರಿ ಸಲಹಾ ಸಮೀತಿಯ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ.ತಿಮ್ಮಾಪೂರ ತಮ್ಮ ನಿರ್ಣಯವನ್ನು ಹಿಂದಕ್ಕೆ ಪಡೆದು ಹಿಂಗಾರು ಹಂಗಾಮಿಗೂ ಕಾಲುವೆಗಳಿಗೆ ನೀರು ಹರಿಸಲು ಆದೇಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಿಶೇಷವಾಗಿ ವಿಜಯಪೂರ ಜಿಲ್ಲೆಯಲ್ಲಿ ಬರಗಾಲದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿ ರೈತರ ದನ ಕರುಗಳಿಗೆ ಉಳಿದ ಬೆಳೆಗಳನ್ನು ಬೆಳೆದುಕೊಳ್ಳಲು ಮಳೆರಾಯನ ಅಭಾವ ಸೃಷ್ಟಿಯಾಗಿರುವದರಿಂದ ಕಷ್ಟಕರವಾದ ಜೀವನವಾಗಿದೆ. ಪೂರ್ವಜನ್ಮದ ಪುಣ್ಯವೋ ಏನೋ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಅಧಿಕಪ್ರಮಾಣದಲ್ಲಿ ಮಳೆಯಾದ ಪ್ರಯುಕ್ತ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ರೈತರಿಗೆ ಕಾಲುವೆಗಳ ಮೂಲಕ ನೀರು ಹರಿದು ಮುಂಗಾರು ಬೆಳೆಯನ್ನು ಬೆಳೆದು ಸಂತ್ರಪ್ತಿಯಿಂದ ಇರಬಹುದು ಕೆಲವು ಕಡೆ ಮುಂಗಾರು ಬೆಳೆಗಳು ಕೈಕೊಟ್ಟು ರೈತನಿಗೆ ಫಸಲು ಬರದೇ ಕಷ್ಟವೆನಿಸುತ್ತಿದೆ ಎಂದರು.
ಅಲ್ಪಾವಧಿಯಲ್ಲಿಯೇ ಬರುವ ಬೆಳೆಗಳಾದ ಜೋಳ, ಕಡಲೆ , ಸೂರ್ಯಕಾಂತಿ, ಮೆಕ್ಕೆಜೋಳ, ಗೋದಿ, ಇನ್ನಿತರ ಬೆಳೆಗಳು ಕಡಿಮೆ ಪ್ರಮಾಣದ ನೀರನ್ನು ಅವಲಂಬಿತವಾಗಿ ಬೆಳೆಯುವ ಬೆಳೆಗಳಾಗಿದ್ದು ಆದ್ದರಿಂದ ಈ ಭಾಗದ ಸರ್ವ ಶಾಸಕರು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸಲಹಾ ಸಮೀತಿ ಅಧ್ಯಕ್ಷ ಸಚಿವ ಆರ್.ಬಿ.ತಿಮ್ಮಾಪೂರ ಅವರ ಮೇಲೆ ಒತ್ತಡ ಹಾಕಿ ಹಿಂಗಾರು ಹಂಗಾಮಿಗೂ ಡಿಸೆಂಬರ, ಜನವರಿ, ಫೆಬ್ರುವರಿ, ಮಾರ್ಚ ತಿಂಗಳ ತನಕ ಕಾಲುವೆಗಳಲ್ಲಿ ವಾರಾಬಂದಿ ಮೂಲಕ ನೀರು ಹರಿಸಲು ಆದೇಶ ಮಾಡುವದರಿಂದ ರೈತರಿಗೆ ಹಾಗೂ ಒಣ ಬೇಸಾಯ ಭೂಮಿಯ ರೈತಾಪಿ ವರ್ಗದ ನಾಗರಿಕೆ ದನ ಕರುಗಳಿಗೆ ಮೇವು ಸಂಗ್ರಹಣೆ ಮಾಡಲು ನೀರು ಬಿಡುವದರಿಂದ ಅನುಕೂಲವಾಗುತ್ತದೆ ಎಂದ ಅವರು, ಒಂದು ವೇಳೆ ಸರಕಾರ ಹಿಂಗಾರು ಹಂಗಾಮಿಗೆ ನೀರು ಕೊಡುವದನ್ನು ನಿಲ್ಲಿಸಿದ್ದೇ ಆದರೆ ಅವಳಿ ಜಿಲ್ಲೆಯ ರೈತರ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಹಣಮಂತ ಬಾಟಿ, ನಂದಪ್ಪ ಗಿಡ್ಡಪ್ಪಗೋಳ, ಈರಪ್ಪ ಬಾಲಗೊಂಡ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Related Posts
Add A Comment