ವಿದಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯ ಬಜೆಟ್ ಕೊಟ್ಟಿರುವಂತಹ ಸಿಎಂ ಸಿದ್ದರಾಮಯ್ಯ ಅವರು ಗ್ರಾರಂಟಿಯನ್ನೇ ಹೊಸ ಆರ್ಥಿಕತೆ ಸೃಷ್ಠಸಿದ್ದೇವೆ ಎನ್ನುವ ಭ್ರಮೆಯನ್ನು ಸೃಷ್ಠಿಸಿದ್ದಾರೆ. ಆರ್ಥಿಕತೆಯ ಹೊಸ ಭಾಷೆ ಬರೆಯುತ್ತೇವೆ. ಪ್ರತಿಯೊಬ್ಬರಿಗೂ ಸಶಕ್ತರನ್ನಾಗಿ ಮಾಡುತ್ತೇವೆ ಎಂದು ಹೊರಟಿದ್ದರು. ಆದರೆ ರಾಜ್ಯ ಆರ್ಥಿಕತೆಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳದ ಸ್ಥಿತಿಗೆ ರಾಜ್ಯ ಸರಕಾರಿ ನೌಕರರು ಬಂದು ತಲುಪಿದ್ದಾರೆ. ಜೊತೆಗೆ ಮಕ್ಕಳ ವಸತಿ, ಸ್ಕಾಲರ್‌ಶಿಪ್ ಇಲ್ಲದೇ ಮಕ್ಕಳು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಸಶಕ್ತಿಕರಣ ಮಾಡುತ್ತೇವೆ ಎಂದು ೫ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿಗೆ ಹಣವಿಲ್ಲ ಎಂಬುದು ಸ್ವಪಕ್ಷದ ಶಾಸಕರಿಂದ ಮಾತುಗಳು ಕೇಳಿವರುತ್ತಿವೆ ಹಾಗಾಗಿ ಇದೊಂದು ಮರಿಚಿಕೆ ಬಜೆಟ್ ಆಗಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ.

