ಉದಯರಶ್ಮಿ ದಿನಪತ್ರಿಕೆ
ಜನರ ನಿರೀಕ್ಷೆ ನನಸಾಗಿಸುವ ಬಜೆಟ್
“ಸರ್ವರಿಗೂ ಅನ್ವಯಿಸುವ ಬಜೆಟ್. ಜನರ ನಿರೀಕ್ಷೆ ನನಸಾಗಿಸುವ ಬಜೆಟ್. ಜನಪರ ಯೋಜನೆಗೆ ಹೆಚ್ಚು ಒತ್ತುನೀಡಿದ್ದಾರೆ. ಮೂಲ ಸೌಕರ್ಯಕ್ಕೆ ಆಧ್ಯತೆ ನೀಡಿದ್ದು ಇದೊಂದು ಉತ್ತಮ ಬಜೆಟ್.”
– ಯಶವಂತರಾಯಗೌಡ ಪಾಟೀಲ
ಶಾಸಕರು, ಇಂಡಿ
ಅಲ್ಪ ಸಂಖ್ಯಾತರ ಕಲ್ಯಾಣದ ಬಜೆಟ್
“ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ೧೫೦ ಸಂಖ್ಯಾಬಲದ ೨೫ಹೊಸ ಮೇಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಯೋಚಿಸಿರುವದು ಸ್ವಾಗತಾರ್ಹ, ವಿದ್ಯಾರ್ಥಿ ಸಂಖ್ಯೆ ೫೦ ರಷ್ಟು ಹೆಚ್ಚಿಸಿ ೧೦ ಕೋಟಿ ಅನುದಾನ ನೀಡಿರುವದು ಮತ್ತು ೧೦ ಹೊಸ ಸಿಬಿಎಸ್ ಇ ಶಾಲೆ ಪ್ರಾರಂಭಿಸುತ್ತಿರುವದು ಸ್ವಾಗತಾರ್ಹ.”
– ಇಲಿಯಾಸ ಬೋರಾಮಣಿ
ಜಿಲ್ಲಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ
ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಅನುದಾನ
“ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಸಮಗ್ರ ಅಬಿವೃದ್ದಿಗಾಗಿ ರೂ.೧೦೦ ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ.”
– ಪ್ರಶಾಂತ ಕಾಳೆ
ತಾಲೂಕಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ
ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲ
“೫೬ ಸಾವಿರ ಸರಕಾರಿ ಖಾಲಿ ಹುದ್ದೆಗಳನ್ನು ತುಂಬುತ್ತಿರುವುದು ಸಂತೋಷದ ವಿಚಾರ. ಇದರಿಂದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.”
– ಶ್ರೀಕಾಂತ ಕೂಡಿಗನೂರ
ಪುರಸಭೆ ಮಾಜಿ ಅಧ್ಯಕ್ಷರು, ಇಂಡಿ
ಅಭಿವೃದ್ದಿ ವಿರೋಧಿ ಬಜೆಟ್
“ಸಾಲದ ಬಜೆಟ್ ನೀಡಿದ್ದಾರೆ. ಅಭಿವೃದ್ದಿ ವಿರೋಧಿ ಬಜೆಟ್. ಕಳಪೆ ದಿಕ್ಕು ದೆಶೆಯಿಲ್ಲದ ಬಜೆಟ್ ಇದಾಗಿದೆ.”
– ಕಾಸುಗೌಡ ಬಿರಾದಾರ
ಬಿಜೆಪಿ ಧುರೀಣರು, ಇಂಡಿ
ಆದಾಯ ಕಡಿಮೆ ಸಾಲ ಹೆಚ್ಚು
“ಆದಾಯ ಕಡಿಮೆ ಸಾಲ ಹೆಚ್ಚು ಬಜೆಟ್ ಬಹುಪರಾಕವಾಗಿದೆ.”
– ಬಿ.ಡಿ.ಪಾಟೀಲ
ಜೆಡಿಎಸ್ ತಾಲೂಕಾ ಅಧ್ಯಕ್ಷರು, ಇಂಡಿ
ನಿಂಬೆ ರಫ್ತಿಗೆ ಯಾವುದೇ ಯೋಜನೆಗಳಿಲ್ಲ
“ನಿಂಬೆ ಅಭಿವೃದ್ದಿ ಮಂಡಳಿಗೆ ಬಜೆಟ್ನಲ್ಲಿ ಹಣ ಇಲ್ಲ, ನಿಂಬೆ ರಪ್ತು ಮಾಡುವ ಕುರಿತು ಬಜೆಟ್ಟಿನಲ್ಲಿ ಯಾವದೇ ಯೋಜನೆಗಳಿಲ್ಲ.”
– ಎಸ್.ಬಿ.ಕಂಬೋಗಿ
ರೈತ ಸಂಘದ ಜಿಲ್ಲಾ ಅಧ್ಯಕ್ಷರು.
ಖಾಲಿ ಚೊಂಬು ಬಜೆಟ್ ಇದಾಗಿದೆ
“ಚೊಂಬು ಚೋಂಬು ಖಾಲಿ ಚೊಂಬು ಬಜೆಟ್ ಇದಾಗಿದೆ.”
– ಬಾಳು ಮುಳಜಿ
ಕರವೇ ಅಧ್ಯಕ್ಷರು, ಇಂಡಿ
ಕೃಷ್ಣಾ ಕಾಲುವೆ ಕಾರ್ಯಗಳಿಗೆ ಹಣ ನೀಡಿಲ್ಲ
“ಕೃಷ್ಣಾ ಕಾಲುವೆ ಕಾರ್ಯಗಳಿಗಾಗಿ ಹಣ ನೀಡದಿರುವದು ದುರಂತ. ಇದರಿಂದ ಸರಕಾರಕ್ಕೆ ನೀರಾವರಿ ಕುರಿತು ಆಸಕ್ತಿ ಇಲ್ಲ ರೈತರ ಹಿತ ಕಾಪಾಡಲು ರೈತರ ಹೊಲಗಳಿಗೆ ನೀರು ಅವಶ್ಯ. ಆದರೆ ಅದನ್ನು ಮರೆತ ಸರಕಾರ.”
– ಅನೀಲಗೌಡ ಬಿರಾದಾರ
ಬಿಜೆಪಿ ಧುರೀಣರು, ಇಂಡಿ

