ಆಲಮಟ್ಟಿ: ಆಲಮಟ್ಟಿ ಜಲಾಶಯ ಎತ್ತರದಿಂದ ಜಲಾವೃತಗೊಳ್ಳುವ ತಾಲ್ಲೂಕಿನ ಏಕೈಕ ಗ್ರಾಮವಾದ ವಂದಾಲ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ವಂದಾಲ ಮುಳಗಡೆ ಹಿತರಕ್ಷಣಾ ವೇದಿಕೆಯ ಸದಸ್ಯರು ಆಲಮಟ್ಟಿಯ ಹೆಚ್ಚುವರಿ ವಿಶೇಷ ಭೂಸ್ವಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 2013 ರಿಂದ ವಂದಾಲ ಗ್ರಾಮ ಮುಳುಗಡೆ ಗ್ರಾಮ ಎಂದು ಘೋಷಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಗ್ರಾಮದ ಮನೆ ಮನೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ಮನೆಗಳ ಮೌಲ್ಯನಿರ್ಧರೀಕರಣ, ಜೆಎಂಸಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು, ಯಾವ ಮನೆಯನ್ನು ಬಿಡದೇ, ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಇನ್ನೂ ಹೊಸ ಪುನರ್ವಸತಿ ಕೇಂದ್ರದ ರಚನಾ ಪ್ರಕ್ರಿಯೆ ಆರಂಭಿಸಬೇಕು. ಅದಕ್ಕೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಮೋಹನ ನಾಗಠಾಣ ಮಾತನಾಡಿದರು.
ಇನ್ನೂ ಹಲವಾರು ಹಂತದಲ್ಲಿ ಕೆಲಸ ಮಾಡಬೇಕಾಗಿರುವದರಿಂದ ವಿಳಂಬಕ್ಕೆ ಅವಕಾಶ ಕೊಡದೇ ಸರ್ಕಾರದ ಸೌಲಭ್ಯ ಗಳನ್ನು ಪಡೆಯಿರಿ. ತಪ್ಪು ಮಾಹಿತಿ ಕೊಡುವವರ ಕಡೆ ಗಮನಕೊಡಬೇಡಿ ಎಂದು ಮನವಿ ಮಾಡಿದರು. ಎಲ್ಲ ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದರು.
ಗ್ರಾಮದ ಮುಖಂಡರಾದ ಏಗನಗೌಡ್ರು ಬಸರಡ್ಡಿ ಹನುಮಂತರಾಯ ಕುಲಕರ್ಣಿ , ಅಂದಾನೆಪ್ಪ ಹತ್ತರಕಿಹಾಳ, ಮಹಾಂತಪ್ಪ ದೊಡಮನಿ ಸಂಗಯ್ಯಾ ಚಿಕ್ಕಮಠ, ರಾಘವೇಂದ್ರ ಹುಲಿಮನಿ, ಮಲ್ಲಪ್ಪ ಗಂಜ್ಯಾಳ , ವಿ. ಬಿ ಹೆಬ್ಬಾಳ, ಕಾಶೀಮಸಾಬ್ ಹಣಗಿ, ಬಸಪ್ಪ ಸುಲಾಖೆ ಎಂ.ಬಿ. ಉಳ್ಳಿಗೌಡ್ರು ವಿಜಯಕುಮಾರ ಅವ್ವಣ್ಣಿ , ಶೇಖು ಹಿರೇಮಠ ,ಮಲ್ಲಪ್ಪ ದಡ್ಡಿ ,ಶಿವನಗೌಡ ಪಾಟೀಲ ಪವಾಡೆಪ್ಪ ಚಲವಾದಿ, ಕಾಂತಯ್ಯ ಚಿಕ್ಕಮಠ, ಅಡಿವಯ್ಯ ಮಠ ಇತರರು ಇದ್ದರು.
Related Posts
Add A Comment