ವಿಜಯಪುರ: ನಗರದ ರಾಜಾಜಿ ನಗರ ನಾಡದೇವಿ ಉತ್ಸವವು ಅ.೧೫ ರಿಂದ ಆರಂಭವಾಗಲಿದೆ ಎಂದು ನಾಡದೇವಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ಏಳಗಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಕ್ತಿ ಶ್ರದ್ದೆಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದೊಂದಿಗೆ ಅ.೧೫ ರಿಂದ ೨೪ ರವರೆಗೆ ಆಚರಿಸಲಾಗುವುದು. ೧೫ ರಂದು ಶ್ರೀ ದೇವಿಗೆ ಅಭಿಷೇಕ ಮಹಾಪ್ರಜೆ ಘಟಸ್ಥಾಪನೆ ಮಹಾಮಂಗಳಾರತಿ, ೧೬ ರಂದು ಸಾಯಂಕಾಲ ಅಚಿತಾರಾಷ್ಟ್ರೀಯ ನೃತ್ಯಗಾರ್ತಿಯರಾದ ಕುಮಾರಿ ದಿವ್ಯ, ದೀಕ್ಷಾ ಭೀಸೆ ಹಾಗೂ ತಂಡದವರಿಂದ ವಿವಿಧ ನೃತ್ಯಗಳು, ಖ್ಯಾತ ಸುಗಮ ಸಂಗೀತಗಾರ್ತಿ ಕುಮಾರಿ ಪ್ರಣತಿ ರಾವ್ ಅವರಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಕನ್ನಡ-ಹಿಂದಿ ಚಿತ್ರಗೀತೆಗಳ ಗಾಯನ ನಡೆಯಲಿದೆ.
ಈ ಕಾರ್ಯಕ್ರಮಗಳ ಸಾನಿಧ್ಯವನ್ನು ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮಿಜಿ ಹಾಗೂ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ರಮೇಶ ಜಿಗಜಿಣಗಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಉದ್ದಿಮೆದಾರ ನೀಲೇಶ ಕೋಳಿ, ಶ್ರೀಮಂತ ಝಳಕಿ, ಮಹಮ್ಮದ ರಫೀಕ್ ಖಾನೆ ಹಾಗೂ ಜಿ.ಓ.ಸಿ.ಸಿ ಬ್ಯಾಂಕ್ ನಿರ್ದೇಶಕಿ ಶ್ರೀಮತಿ ಜಯಶ್ರೀ ಬೆಣ್ಣಿ ಅವರು ಭಾಗವಹಿಸಲಿದ್ದಾರೆ.
೧೯ ರಂದು ಲಲಿತಾ ಪಂಚಮಿ ಶ್ರೀ ದೇವಿಗೆ ಅಭೀಷೇಕ, ಕುಂಕುಮಾರ್ಚನೆ ಹಾಗೂ ರಾತ್ರಿ ಗೋದಳಿ ಕಾರ್ಯಕ್ರಮ ನಡೆಯಲಿದೆ. ೨೦ ರಂದು ದೇವಿಗೆ ಸುಮಂಗಲೆಯರಿಂದ ಉಡಿ ತುಂಬುವ ಮತ್ತು ಮಧ್ಯಾನ್ಹ ಅನ್ನ ಸಂತರ್ಪಣೆ, ಸಾಯಂಕಾಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಕೆ. ಈ. ಕುಲಕರ್ಣಿ ನೆರವೇರಿಸಲಿದ್ದು, ಅತಿಥಿಗಳಾಗಿ ನಿವೃತ್ತರಾದ ಎಸ್.ಜಿ.ಬಾಗೇವಾಡಿ, ಎಸ್.ಬಿ.ಹಂಪಣ್ಣವರ, ಎಮ್.ಎಸ್.ಕಳ್ಳಿಮನಿ, ಸುರೇಶ ಪಾಟೀಲ, ಸಿದ್ದನಗೌಡ ಪಾಟೀಲ ಹಾಗೂ ಡಾ. ಗಿರೀಶ ಬಗಲಿ ಭಾಗವಹಿಸಲಿದ್ದಾರೆ.
೨೧ ರಂದು ಭವಾನಿ ತಲವಾರ ಅಲಂಕಾರ ಪ್ರಜೆ, ೨೨ ರಂದು ದುರ್ಗಾಷ್ಟಮಿ, ಕುಮಾರಿ ಮುತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ, ೨೩ ಮಹಾನವಮಿ ೨೪ ರಂದು ಬನ್ನಿ ಮುಡಿಯುವ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿವೆ.
ರಾಜಾಜಿ ನಗರ ಹಾಗೂ ಸುತ್ತಲಿನ ಬಡಾವಣೆಗಳ ಸದ್ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ನಾಡದೇವಿ ಉತ್ಸವ ಸಮಿತಿ ಅಧ್ಯಕ್ಷ ಬಾಬು ಏಳಗಂಟಿ ಅವರು ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

