ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೆಲೆ ದುಡಿಯುತ್ತಿರುವ ವಾಹನ ಚಾಲಕ, ನಿರ್ವಾಹಕರು, ಕಸ ಸಂಗ್ರಹಗಾರರು ಮತ್ತು ಲೋಡರ್ಸ್ ಯುಜೀಡಿ ಕಾರ್ಮಿಕರು ಮತ್ತು ಸುಪರವೈಜರಗಳ ಹಾಗೂ ನೇರ ಪಾವತಿ ಪೌರ ಕಾರ್ಮಿಕರ ೦೪ ತಿಂಗಳ ವೇತನ ನೀಡುವಂತೆ ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘ (ರಿ) ವಿಜಯಪುರ, ಕರ್ನಾಟಕ ಮುನ್ಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಇವರ ಸಹಯೋಗದೊಂದಿಗೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ವೇತನ ಪಾವತಿಗಾಗಿ ೦೩ ದಿನಗಳ ಕಾಲಾವಕಾಶವನ್ನು ಕೊಟ್ಟಿರುತ್ತಾರೆ. ಒಂದು ವೇಳೆ ಮೂರು ದಿನಗಳಲ್ಲಿ ವೇತನ ಪಾವತಿ ಆಗದೇ ಹೋದಲ್ಲಿ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭ ಮುಖಂಡರು ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕ, ನಿರ್ವಾಹಕರು,ಕಸ ಸಂಗ್ರಹಗಾರರು ಮತ್ತು ಲೋಡರ್ಸ್ ಯುಜಿಡಿ ಕಾರ್ಮಿಕರು ಮತ್ತು ಸುಪರವೈಜರಗಳ ಹಾಗೂ ನೇರ ಪಾವತಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದು, ಇವರಿಗೆ ೦೪ ತಿಂಗಳಿಂದ ಗುತ್ತಿಗೆದಾರರು ವೇತನ ಪಾವತಿ ಮಾಡುತ್ತಿಲ್ಲ. ಹಾಗೂ ಇಲ್ಲಿಯವರೆಗೆ ಇಲ್ಲಿಯವರೆಗೆ ಇ.ಎಸ್.ಐ. ಹಾಗೂ ಪಿ.ಎಫ್ , ಹಣವನ್ನು ಭರಣಾ ಮಾಡಿರುವದಿಲ್ಲ ಆದರೆ ನಾವು ಈಗಾಗಲೇ ಸಂಘದವತಿಯಿಂದ ಅನೇಕ ಭಾರಿ ಮೌಖಿಕವಾಗಿ ಗುತ್ತಿಗೆದಾರರಿಗೆ ಹೇಳಿದರು. ವೇತನ ಪಾವತಿ ಮಾಡದೇ ಗುತ್ತಿಗೆದಾರರು ಉಡಾಫೆಯಾಗಿ ನಿಮ್ಮ ಮೇಲಾಧಿಕಾರಿಗಳು ಚೆಕ್ ನೀಡಿರುವದಿಲ್ಲ ಅಂತಾ ಹೇಳುತ್ತಿದ್ದಾರೆ. ಆದರೆ ಈಗಾಗಲೇ ನಾಲ್ಕು ತಿಂಗಳ ವೇತನ ಇಲ್ಲದೇ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕ ಮನೆ ಬಾಡಿಗೆ ಮನೆಯಲ್ಲಿ ತಿನ್ನಲು ರೇಶನ್ ಇಲ್ಲದೇ ಇರುವದರಿಂದ ಅನಿವಾರ್ಯವಾಗಿ ಕಾರ್ಮಿಕರು ಅನಿರ್ಧಿಷ್ಟವಾಗಿ ಕೆಲಸ ಬಂದ್ ಮಾಡಿ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಹಾಗೂ ಪರಿಸರ ಅಭಿಯಂತರ ಅಶೋಕಕುಮಾರ ಸಜ್ಜನ ರವರನ್ನು ಅಮಾನತು ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಶಂಕರ ಎಚ್. ಚಲವಾದಿ, ಲಕ್ಷ್ಮಣ ಹಂದ್ರಾಳ, ಸಂಜು ಕಂಬಾಗಿ, ದಯಾನಂದ, ತನ್ವೀರ ಗುಲ್ಪರೋಶ, ಮೌಸೀನ ಆಲಮೇಲ, ಅತ್ತಾರ, ರಮೇಶ ರಾಠೋಡ, ಸತೀಶ ಚಲವಾದಿ, ಜಾವೀದ ಅತ್ತಾರ, ಮೊಹಸೀನ್, ಹುಸೇನ ಮುಲ್ಲಾ, ಪ್ರವೀಣ ಕಳ್ಳಿಮನಿ, ಸಾಗರ ಬಿಜಾಪುರ ಹಾಗೂ ಸುಮಾರು ೧೦೦ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.
Related Posts
Add A Comment