ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ) ಹಾಗೂ ಪ್ರೇಮದೀಪ ಯುವ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ವಚನ ಶಿಲಾ ಮಂಟಪದ ನಿರ್ಮಾತೃ ಲಿಂ. ಚನ್ನಬಸವ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮ ಜ.11 ರಂದು ಬೆಳಗ್ಗೆ 10 ಹಮ್ಮಿಕೊಳ್ಳಲಾಗಿದೆ.ಸಾನಿಧ್ಯವನ್ನು ಶ್ರೀಮಠದ ಜಗದ್ಗುರು ಡಾ. ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ವಹಿಸುವರು. ಜಾನಪದ ಸಾಹಿತಿ ಶಂಕರ ಬೈಚಬಾಳ ನುಡಿನಮನ ಸಲ್ಲಿಸುವರು. ಕಾರ್ಯಕ್ರಮದಲ್ಲಿ ಭಜನೆ, ರಿವಾಯತ, ಚೌಡಕಿ, ಹಂತಿ ಮತ್ತು ಸಂಪ್ರದಾಯ ಕಲಾವಿದರು ಶ್ರೀಗಳ ಕುರಿತು ಹಾಡು ಹೇಳುವರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಶಿಕ್ಷಕರು, ಕಜಾಪ ಪದಾಧಿಕಾರಿಗಳು, ಮಠದ ಭಕ್ತರು ಭಾಗವಹಿಸಲಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ತಿಳಿಸಿದ್ದಾರೆ.
