ಮೋರಟಗಿಯಲ್ಲಿ ರೂ.೧ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ನಮ್ಮ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿವೆ, ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಪಂಚ ಯೋಜನೆಗಳನ್ನು ಅತ್ಯಂತ ಪಾರದರ್ಶಕವಾಗಿ ನೀಡುವುದರ ಜೊತೆಗೆ ಮತ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತಿದೆ ಸಾರ್ವಜನಿಕರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
೪೭೦೨ ಕೆರೆಗಳ ಆದುನಿಕರಣ ಪ್ರಧಾನ ಕಾಮಗಾರಿಗಳ ಅಡಿಯಲ್ಲಿ ಮಂಜೂರಾದ ಒಂದು ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜ್ಯಾತಿ ಮತ ಪಂಥ ಪಕ್ಷ ಪಾತವಿಲ್ಲದೆ ಇಲ್ಲಿಯವರೆಗೆ ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ೧ ಲಕ್ಷದ ೮ ಸಾವಿರ ಕೋಟಿ ಕೊಡುವುದರ ಜೊತೆಗೆ ಎಲ್ಲ ಮತಕ್ಷೇತ್ರದ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲೆ ಕಾಲೇಜು ಮಠ ಮಾನ್ಯಗಳ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಸ್ಪಂದಿಸಿ ಅಭಿವೃದ್ಧಿಯತ್ತ ಸಾಗುತ್ತಿದೆ ಕೆರೆ ಅಭಿವೃದ್ಧಿ ಜೊತೆಗೆ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮುಖ್ಯ ಕೇನಾಲ್ ಮುಖಾಂತರ ಪೈಪ್ ಲೈನ್ ಗಾಗಿ ೫೦ ಲಕ್ಷ ರೂ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಎನ್ ಆರ್ ತಿವಾರಿ, ಹಿರಿಯ ಕಾಂಗ್ರೆಸ್ ಮುಖಂಡ ಎಂ ಕೆ ಕಣ್ಣಿ, ಮುತ್ತಪ್ಪ ಸಿಂಗೆ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಪ್ರಕಾಶ ಅಡಗಲ,ರಜಾಕ ಬಾಗವಾನ, ಖಾದಿರ ಬಂಕಲಗಿ, ಅಯ್ಯನಗೌಡ ಬಿರಾದಾರ, ರೇವಣಸಿದ್ಧ ಮಸಳಿ, ಸಲೀಮ್ ಕಣ್ಣಿ, ರಮೇಶ ನಡುವಿನಕೇರಿ, ಸುಬಾಸ ಭಾರತಿ, ಸೇರಿದಂತೆ ಅನೇಕರು ಇದ್ದರು.
ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
೨೦೨೪-೨೫ನೇ ಸಾಲಿನ ಮಳೆ ಪರಿಹಾರದ ಕಾರ್ಯಕ್ರಮದಡಿ ೧೦ ಲಕ್ಷ ರೂಪಾಯಿ ಅನುದಾನದ ಗ್ರಾಮದ ಜಿಡಗಾ ಮುತ್ಯಾ ಮಠದ ಸಿಸಿ ರಸ್ತೆ ಕಾಮಗಾರಿಗೆ ಸಾಸಕ ಅಸೋಕ ಮನಗೂಳಿ ಚಾಲನೆ ನೀಡಿದರು.

