ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಭಾರತೀಯ ಭೀಮಸೇನೆಯ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಪಿಡಿಓ ಎ.ಟಿ.ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಶುಕ್ರವಾರ ತೆರಳಿದ ಭೀಮಸೇನೆಯ ಕಾರ್ಯಕರ್ತರು ಮೂಲಭೂತ ಸೌಲಭ್ಯಗಳ ಕುರಿತು ಪಿಡಿಓ ಅವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಟಿ.ಎಸ್.ಹೆಬ್ಬಾಳ ಮಾತನಾಡಿ, ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಕೇಶಿರಾಜ ವೃತ್ತದಲ್ಲಿ ಪ್ರಯಾಣಿಕರ ತಂಗುದಾಣ, ಶಾಲೆಯ ಶೌಚಾಲಯದ ಕಂಪೌAಡ ಗೋಡೆ ಎತ್ತರಿಸುವುದು ಹಾಗೂ ಮೈದಾನ ಸ್ವಚ್ಛತೆ, ಗ್ರಾಮದಲ್ಲಿನ ಮೂರು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಿಟಕಿ, ಬಾಗಿಲುಗಳ ರಿಪೇರಿ, ಬಸವೇಶ್ವರ, ಕೇಶಿರಾಜ, ಅಂಬೇಡ್ಕರ್ ವೃತ್ತಗಳು ಹಾಗೂ ಹನುಮಾನ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಾಣ, ಚರಂಡಿ ನಿರ್ಮಾಣ, ಬಸ್ ನಿಲ್ದಾಣ ಕಟ್ಟಡ ಎತ್ತರಿಸುವಿಕೆ, ಹೈಮಾಸ್ಟ್ ದೀಪಗಳ ಅಳವಡಿಕೆ ಹಾಗೂ ಹೊಸ ಬೀದಿದೀಪಗಳ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಪಿಡಿಓ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿ ಶಿವಾನಂದ ಬಸವಾಪಟ್ಟಣ, ಮಂಜುನಾಥ ಕೊಂಡಗೂಳಿ, ರಾಜು ಗಣಾಚಾರಿ, ಶಿವು ಕೊಳ್ಳಾರಿ, ಮಂಜುನಾಥ ಬಡಿಗೇರ, ಅಶ್ವಥ್, ವಿಶ್ವನಾಥ, ಮಹೇಶ, ಮೌನೇಶ, ಅನೀಲ, ಪರಶುರಾಮ, ನವೀನ, ಭೀರಲಿಂಗಪ್ಪ ಇದ್ದರು.

