ಉದಯರಶ್ಮಿ ದಿನಪತ್ರಿಕೆ
ಗದಗ: ಉತ್ತರ ಕರ್ನಾಟಕ ಕಲಾವಿದರ ಮತ್ತು ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ ಗದಗ ಮತ್ತು ರೋಟರಿ ಗದಗ ಸೆಂಟ್ರಲ್ ಗದಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಕಾರ್ಯಕ್ರಮ ೬ ನೆಯ ಕಾರ್ಯಕ್ರಮವಾದ, ಜ್ಯುಗಲಬಂದಿ ಸಂಗೀತದೊಂದಿಗೆ ರೋಟರಿ ಪರಿವಾರ ಸಭೆ ಸಮಾರಂಭವು ೧೦ ನೇ ಜನೇವರಿ ೨೦೨೬ ಶನಿವಾರ ಸಂಜೆ ೬ ಗಂಟೆಗೆ ಸೇವಾಲಾಲ ನಗರದ ‘ರೋಟರಿ ಭವನ’ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷರಾದ ರೋ. ಚೇತನ ಬಿ. ಅಂಗಡಿ ಇವರು ವಹಿಸಿಕೊಳ್ಳುವರು. ರೋಟರಿ ಅಸಿಸ್ಟೆಂಟ್ ಗೌರ್ನರ್ ಗದಗ ಡಿಸ್ಟಿಕ್ ಮತ್ತು ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರೋ. ವಿ. ಕೆ. ಗುರುಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಅಧ್ಯಕ್ಷರಾದ ಶ್ರೀ ವಿವೇಕಾನಂದಗೌಡ ಪಾಟೀಲ್, ಮಾಜಿ, ರೋಟರಿ ಅಸಿಸ್ಟೆಂಟ್ ಗೌರ್ನರ್ ಗದಗ ಡಿಸ್ಟಿಕ್, ರೋ. ಮಲ್ಲಿಕಾರ್ಜುನ ಐಲಿ, ಕಲಾ ವಿಕಾಸ ಪರಿಷತ್ ಸಂಸ್ಥಾಪಕರಾದ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ಮುಖ್ಯಅತಿಥಿಗಳಾಗಿ ಆಗಮಿಸುವರು.
ರೋಟರಿ ಗದಗ ಸೆಂಟ್ರಲ್ ಪರಿವಾರಕ್ಕಾಗಿ ಆಯೋಜಿಸಲಾದ ವಾಯೋಲಿನ ಮತ್ತು ತಬಲಾ ಜ್ಯುಗಲಬಂದಿ ಕಾರ್ಯಕ್ರಮದಲ್ಲಿ, ಜೈಪುರದ ಅಂತರಾಷ್ಟ್ರೀಯ ಖ್ಯಾತ ಕಲಾವಿದರಾದ ವಯೋಲಿನ ವಾದಕ ‘ಉಸ್ತಾದ’ ಗುಲ್ಜಾರ ಹುಸೈನ (ರಾಜಸ್ಥಾನ) ಗದುಗಿನ ಆಕಾಶವಾಣಿ ‘ಎ’ ಗ್ರೇಡ್ ತಬಲಾ ವಾದಕ ಕಲಾವಿದ ಪಂ. ಶರಣಕುಮಾರ ಗುತ್ತರಗಿ ಇವರು ವಯೋಲಿನ ಮತ್ತು ತಬಲಾ ಜ್ಯುಗಲಬಂದಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ ಐ.ಡಿ.ಬಿ.ಐ. ಬ್ಯಾಂಕ್ ಗದಗ ಬ್ರಾಂಚ್ ಮ್ಯಾನೇಜರ ಶ್ರೀ ವಿಕ್ರಮ ಕಡೆಮನಿ ಇವರನ್ನು ಸನ್ಮಾನಿಸಲಾಗುವುದು.
ಆತಿಥೇಯರಾಗಿ, ರೋ. ರಾಜು ಕುರಡಗಿ, ರೋ.ಮಲ್ಲಿಕಾರ್ಜುನ ಚಂದಪ್ಪನವರ, ರೋ. ಮಂಜುನಾಥ ಕಬಾಡಿ, ರೋ. ಪರಶುರಾಮ ನಾಯ್ಕರ್ ಇವರು ಉಪಸ್ಥಿತರಿರುವರು.
ಕಾರ್ಯಕ್ರಮನಿರೂಪಣೆಯನ್ನು ಶ್ರಿಮತಿ ಸಂಕೇತ ಸಿದ್ಲಿಂಗ ಇವರು ನಡೆಸಿಕೊಡುವರು. ಎಂದು ಕಾರ್ಯದರ್ಶಿ ರೋ. ರಾಜು ಉಮನಾಬಾದಿ ಕೋಷ್ಯಾಧ್ಯಕ್ಷರು ರೋ. ಡಾ. ಪ್ರಭು ಗಂಜಿಹಾಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


