ಉದಯರಶ್ಮಿ ದಿನಪತ್ರಿಕೆ
ಚಡಚಣ: ಬೆಂಗಳೂರಿನ ಕವಾಯತ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಹೊಯ್ಸಳ-26 ವಾಹನದ ಪೊಲೀಸ್‌ರಾಗಿ ಕಾರ್ಯನಿರ್ವಹಿಸುತ್ತಿರುವ ಶಂಕರಲಿಂಗ ಯಲ್ಲಪ್ಪ ಕುಂಬಾರ ಅವರಿಗೆ ಬೆಂಗಳೂರು ನಗರ ಭಾ.ಪೊ.ಸೇ. ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರಿಂದ ಅಭಿನಂದಿನಾ ಪ್ರಶಂಸಾ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಶಂಕರಲಿಂಗ ಯಲ್ಲಪ್ಪ ಕುಂಬಾರ ಎ.ಹೆಚ್.ಸಿ-22064 ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದವರಾದ ಮತ್ತು ಸುಮಾರು 15 ವರ್ಷ ಈ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದು,ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 2 ತಿಂಗಳ (ಹಸಗೂಸು) ಶಿಶುವನ್ನು ಸುರಕ್ಷೀತವಾಗಿ ರಕ್ಷಿಸಿ, ವಾಣಿವಿಲಾಸ್ ಆಸ್ಪತ್ರೆಗೆ ಆರೈಕೆಗಾಗಿ ದಾಖಲಿಸಿ ಉತ್ತಮ ಕಾರ್ಯ ನಿರ್ವಹಿಸಿರುವ ಪ್ರಯುಕ್ತ ಅವರಿಗೆ ಅಭಿನಂದಿಸಿ ಈ ಪ್ರಶಂಸಾ ಪ್ರಮಾಣ ಪತ್ರವನ್ನು ಸೀಮಾಂತ್ ಕುಮಾರ್ ಸಿಂಗ್, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರು ಸರಳ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಉತ್ತಮ ಕೆಲಸ ಮಾಡಿ ಸಾಧನೆಗೈದ ಪೊಲೀಸ್‌ರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.

