ಉದಯರಶ್ಮಿ ದಿನಪತ್ರಿಕೆ
ಇಂಡಿ: ದ್ವಿಚಕ್ರ ವಾಹನದ ಮೇಲೆ ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ರೈತನೋರ್ವ ಸಿನಿಮಿಯ ರೀತಿಯಲ್ಲಿ ವಾಹನದ ಮೇಲೆ ಬೆನ್ನಟ್ಟಿದಾಗ ಕುರಿಯನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬ ರೈತನ ಮನೆಯ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚಿಕೊಂಡು ಕಳ್ಳರು ದ್ವಿಚಕ್ರವಾಹನದಲ್ಲಿ ಓಡಿ ಹೋಗುತ್ತೀರುವ ಸಂದರ್ಭದಲ್ಲಿ ಅವರನ್ನು ರೈತ ಶ್ರೀನಿವಾಸ್ ತಳವಾರ ದ್ವಿಚಕ್ರದ ವಾಹನದ ಬೆನ್ನಟ್ಟಿ ಅವರನ್ನು ಹಿಡಿಯಲು ಪ್ರಯತ್ನ ಮಾಡಿದ್ದಾರೆ.
ಆದರೆ ಕಳ್ಳರು ಇಂಡಿ ನಗರದ ಅಗ್ನಿಶಾಮಕ ಠಾಣೆ ಹತ್ತಿರ ಕುರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಒಂದೇ ದ್ವೀಚಕ್ರವಾಹನದಲ್ಲಿದ್ದ ಮೂವರು ಕಳ್ಳರು ವೆಹಿಕಲ್ ಸಂಖ್ಯೆ ಕೆಎ 28 ಕ್ಯೂ 5523 ಹೊಂದಿದ್ದು ಇಂಡಿ ನಗರ ಸೇರಿಕೊಂಡು ಪರಾರಿಯಾಗಿದ್ದಾರೆ.
ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

