ಸಿಂದಗಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಹಿಂದೆ ಹುಬ್ಬಳ್ಳಿ ಕಾಲೇಜಿನಲ್ಲಿ ನೇಹಾ ಹಿರೇಮಠ ಕಗ್ಗೊಲೆ ಮಾಡಿದ ಮತಾಂಧ ಪಯಾಝನ ಪ್ರಕರಣ, ಗದುಗಿನ ಅಪೂರ್ವ ಪುರಾಣಿಕ್ ಪ್ರಕರಣ, ವಿಜಯಲಕ್ಷ್ಮೀ ತಳವಾರ ಜಿಹಾದಿ ಸದ್ದಾಂ ಎಂಬಾತನ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪ್ರಕರಣ ಸೇರಿ ಇವೆಲ್ಲವೂ ಲವ್ ಜಿಹಾದನಿಂದ ಮಾಡುವ ವಿವಿಧ ಕರಾಳ ಮುಖಗಳಾಗಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನು ಓಲೈಕೆ ಮಾಡುವಲ್ಲಿ ತೊಡಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಮುಖ ಶೇಖರಗೌಡ ಹರನಾಳ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ರಂಜಿತಾ ಬರ್ಬರ ಹತ್ಯೆ ಮತ್ತು ಹೋರಾಟಗಾರರ ಬಂಧನ ಬಿಡುಗಡೆ ಮಾಡುವಂತೆ ಪ್ರತಿಭಟಿಸಿ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಯಲ್ಲಾಪುರದ ರಾಮಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿ ತನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದ ಕಡುಬಡತನದ ಹಿಂದೂ ಹೆಣ್ಣು ಮಗಳು ರಂಜಿತಾ ಅವರ ಬರ್ಬರ್ ಹತ್ಯೆ ಖಂಡನೀಯ. ರಂಜಿತಾಳ ಹತ್ಯೆ ಮಾಡಿದ ಮುಸ್ಲಿಂ ಜಿಹಾದಿ ರಫೀಕ್ ಹಿಂದೂ ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ ಆತನಿಗೆ ಈ ಹತ್ಯೆಯಲ್ಲಿ ಕುಮ್ಮಕ್ಕು ನೀಡಿದವರನ್ನು ಬಂಧಿಸಲೇಬೇಕು ಎಂದು ಆಗ್ರಹಿಸಿ ಈ ಪ್ರಕರಣಗಳು ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಈ ಎಲ್ಲ ಪ್ರಕರಣಗಳನ್ನು ಎನ್.ಐ.ಎ ಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ವಿಜಯಪುರದಲ್ಲಿ ಸರಕಾರಿ ಕಾಲೇಜು ಸ್ಥಾಪನೆಗಾಗಿ ಹೋರಾಟ ಮಾಡುತ್ತಿರುವ ರೈತ ಮುಖಂಡರು, ಮಠಾಧೀಶರು, ದಲಿತ ಮುಖಂಡರು, ಪತ್ರಕರ್ತರು ಹಾಗೂ ವಿವಿಧ ಸಮಾಜ ಮತ್ತು ಸಂಘಟನೆ ಮುಖಂಡರನ್ನು ಪೊಲೀಸ್ ಇಲಾಖೆ ಬಂದಿಸಿದ್ದು, ಈ ಕೂಡಲೇ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ದಲಿತ ಯುವ ಮುಖಂಡ ಭೀಮಾಶಂಕರ ರತ್ನಾಕರ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಈ ಎಲ್ಲಾ ಹತ್ಯೆಗಳಿಗೆ ಮೂಲ ಕಾರಣ ಲವ್ ಜಿಹಾದ್. ಇಂತಹ ಪ್ರಕರಣಗಳನ್ನು ನಾವು ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ನಡೆವುದನ್ನು ನೋಡುತ್ತಿದ್ದೆವು. ಆದರೆ ಪ್ರಸ್ತುತ ಕರ್ನಾಟಕದಲ್ಲಿಯೂ ನೋಡುವ ದುಸ್ಥಿತಿ ನಿರ್ಮಾಣವಾಗಿದೆ. ಪ್ರಕರಣಗಳನ್ನು ನಿಭಾಯಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವನ್ನು ದೂರಿದರು.
ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅದಕ್ಷ ಬಸನಗೌಡ ಬೆನ್ನಟ್ಟಿ, ಪ್ರಮುಖ ನಂದೀಶ ನಂದರಗಿ, ರಾಯಪ್ಪ ಬಡಿಗೇರ, ಶಿವರಾಜ, ಸಿದ್ದು, ಅನಿಲ, ಚಂದನಗೌಡ, ಜಗದೀಶ, ಬಸನಗೌಡ, ರಮೇಶ, ಹಣಮಂತ, ದಲಿತ ಮುಖಂಡ ಪರಶುರಾಮ ಕುಮಸಗಿ, ರಮೇಶ ಗನ್ನಾಪುರ, ದತ್ತು ಹೊಸಮನಿ, ಏಕನಾಥ ದ್ವಾಶಾಳ, ಮುಕೇಶ ಬಡಿಗೇರ, ಬಸು ಖಾನಾಪುರ, ಲಕ್ಷ್ಮಣ, ತಾಲೂಕು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಬಸವರಾಜ ಬಿರಾದಾರ, ಸೇರಿದಂತೆ ಅನೇಕರು ಇದ್ದರು.

