ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪಿಡಿಜೆ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ರವಿವಾರ ಸಂಜೆ (ದಿನಾಂಕ ೧೧ ರ) ಸಂಜೆ ೫.೩೦ ಗಂಟೆಗೆ ವಿವೇಕಾನಂದರ ಜಯಂತಿ ನಿಮಿತ್ತವಾಗಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶ್ರೀಮತಿ ಭಾರತಿ ಹಾಗೂ ಆನಂದ ಗೋಡಸೆ ದಂಪತಿಗಳು ವಹಿಸಿಕೊಂಡಿದ್ದು, “ವಿವೇಕಾಂದರ ರಾಷ್ಟ್ರೀಯ ಚಿಂತನೆಗಳು” ವಿಷಯದ ಮೇಲೆ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಜಿ ಆರ್ ಕುಲಕರ್ಣಿಯವರು ಉಪನ್ಯಾಸ ಮಾಡಲಿದ್ದಾರೆ ಎಂದು “ಅಭಾಸಾಪ ವಿಜಯಪುರ” ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಹಾಗೂ ಉಪಾಧ್ಯಕ್ಷರಾದ ವಿವೇಕ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ 9880050818 ವಿವೇಕ ಕುಲಕರ್ಣಿ , ಸುಕಾಂತ 8105473275 , ಅನಿಲ ಬಳ್ಳುಂಡಗಿ 9535792295 ಸಂಪರ್ಕಿಸಲು ಕೋರಲಾಗಿದೆ.
