ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜ.೯ ರಂದು ರಂದು ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸಿ, ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಪ್ರತಿಮೆ ಅನಾವರಣ, ಬಸ್ ನಿಲ್ದಾಣ ನಾಮಕರಣ ಹಾಗೂ ಭೂತನಾಳ ತಾಂಡಾದ ಹತ್ತಿರವಿರುವ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ಹಾಗೂ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿಸಾರ್ವಜನಿಕ ರಸ್ತೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ಸಂಚಾರ ಮಾರ್ಗ ಬದಲಾಯಿಸಿ ಪರ್ಯಾಯ ಮಾರ್ಗ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕೆ.ಎಸ್.ಆರ್.ಟಿ.ಸಿ ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ವಿಜಯಪುರ ತಾಲೂಕಿನ ಗ್ರಾಮಗಳ ಹಾಗೂ ಬೇರೆ-ಬೇರೆ ಜಿಲ್ಲೆಗಳಿಂದ ವಿಜಯಪುರಕ್ಕೆ ಬರುವ ಬಸ್‌ಗಳನ್ನು ಸೋಲಾಪೂರ ನಾಕಾ, ಸಿಂದಗಿ ನಾಕಾ, ಮನಗೂಳಿ ನಾಕಾ, ಜಮಖಂಡಿ ನಾಕಾ ಹಾಗೂ ಇಟಗಿ ಪೆಟ್ರೋಲ್ ಪಂಪ್ ಹತ್ತಿರ ನಿಲ್ಲಿಸಲಾಗುವುದು. ಸಾರ್ವಜನಿಕರು ಬೇರೆ ವಾಹನ ಬಳಸಿಕೊಂಡು ನಗರಕ್ಕೆ ಆಗಮಿಸಬಹುದಾಗಿದೆ.
ಸೋಲಾಪೂರ, ಸಿಂದಗಿ ಮತ್ತು ಇಂಡಿ ಕಡೆಯಿಂದ ಬಂದು ವಿಜಯಪುರದಿಂದ ಬೇರೆ ಜಿಲ್ಲೆ-ರಾಜ್ಯಗಳಿಗೆ ನಿರ್ಗಮಿಸುವ ಕೆಸ್‌ಆರ್‌ಟಿಸಿ ಹಾಗೂ ಭಾರಿ ಗಾತ್ರದ ವಾಹನಗಳು ಸಿಂದಗಿ ನಾಕಾದಿಂದ ಸ್ಟೇಷನ್ ರಸ್ತೆ ಮಾರ್ಗದ ಮೂಲಕ ನೇರವಾಗಿ ಮನಗೂಳಿ ನಾಕಾ ಮೂಲಕ ಜಲನಗರ -ಮನಗೂಳಿ ಅಗಸಿ ಮುಖಾಂತರ ಬಸ್ ನಿಲ್ದಾಣಕ್ಕೆ ಆಗಮಿಸಬಹುದಾಗಿದೆ.ಅಥಣಿ, ಕೋಲ್ದಾರ ಮತ್ತು ಜಮಖಂಡಿ ಕಡೆಯಿಂದ ಆಗಮಿಸಿ, ವಿಜಯಪುರದಿಂದ ಬೇರೆ ಜಿಲ್ಲೆ-ರಾಜ್ಯಗಳಿಗೆ ತೆರಳುವ ಕೆಸ್‌ಆರ್‌ಟಿಸಿ ಹಾಗೂ ಭಾರಿ ಗಾತ್ರದ ವಾಹನಗಳು ಜಮಖಂಡಿ ನಾಕಾದ ಮೂಲಕ ಬಿದನೂರ ಪೆಟ್ರೊಲ್ ಪಂಪ್, ನಾಯರಾ ಪೆಟ್ರೋಲ್ ಪಂಪ್-ನವಬಾಗ ರೋಡ್ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ
ಸ್ಟೇಷನ್ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗೋಲಗುಮ್ಮಜದಿಂದ ಹಕೀಂ ಚೌಕ – ಜೆ.ಎಮ್ ರೋಡ್- ಅಸ್ಪಪೈಲ್ ಬಂಗಲಾ – ಬಾಗಲಕೋಟ ಕ್ರಾಸ್ ಮೂಲಕ ಹಾಗೂ ಸ್ಟೇಷನ್ ರಸ್ತೆಯಲ್ಲಿ ಇನ್ನೊಂದು ಪರ್ಯಾಯ ಮಾರ್ಗ ಬಡಿಕಮಾನ ಕ್ರಾಸ್ ಜೆ.ಎಮ್ ರೋಡ್ ಅಸ್ಪಪೈಲ್ ಬಂಗಲಾ ಬಾಗಲಕೋಟೆ ಕ್ರಾಸ ಮೂಲಕ ನಿಲ್ದಾಣಕ್ಕೆ ಆಗಮಿಸುವುದು.
ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್ ಸ್ಥಳಗಳು
ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವ ವಾಹನ ಜೋಡಗುಮ್ಮಟ ರಸ್ತೆಯಲ್ಲಿ ಮತ್ತು ಹಳೆಯ ತಹಶೀಲ್ದಾರ ಕಛೇರಿಯ ರಸ್ತೆಯಲ್ಲಿ ನಿಲ್ಲಿಸುವುದು. ದರಬಾರ ಹೈಸ್ಕೂಲಿನ ಕಾರ್ಯಕ್ರಮಕ್ಕೆ ಬರುವ ವಿ.ವಿ.ಐ.ಪಿ ವಾಹನಗಳನ್ನು ಸ್ಟೇಡಿಯಂ ಮುಂಭಾಗದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ದರಬಾರ ಹೈಸ್ಕೂಲಿನ ಕಾರ್ಯಕ್ರಮದ ಕರ್ತವ್ಯಕ್ಕೆ ಬರುವ ಪೋಲೀಸ್ ಅಧಿಕಾರಿಗಳ ವಾಹನಗಳನ್ನು ಆಸಾರ ಮಹಲಿನ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಗೋಲಗುಮ್ಮಜ ಪಾರ್ಕಿಂಗ್ ಸ್ಥಳದಲ್ಲಿ, ಪಿಡಬ್ಲ್ಯೂಡಿ ಕಛೇರಿ ಆವರಣ, ಹಳೆಯ ಐಬಿ, ಪಸಾರಿ ಕಮಾನ ರಸ್ತೆ, ಕರ್ನಾಟಕ ಲೋಕಾಯುಕ್ತ ಕಛೇರಿಯ ಮುಂಭಾಗ, ಸ್ಟೇಡಿಯಂ ಮುಂಭಾಗದಲ್ಲಿರುವ ಇಂಡಿ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

