ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರಕ್ಕೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನವ ಕರ್ನಾಟಕ ಸಂಗೀತ ಪದವೀಧರ ಸಂಘದ ಸದಸ್ಯರು ಭೇಟಿ ಮಾಡಿ ಕಳೆದ ೧೫ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾಗದೆ ಇರುವ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕುವೆಂಪು ಶತಮಾನ ಮಾದರಿ ಶಾಲೆಗಳಲ್ಲಿ, ಆದರ್ಶ ವಿಶ್ವವಿದ್ಯಾಲಯ ಶಾಲೆಗಳಲ್ಲಿ, ಕರ್ನಾಟಕ ಪಬ್ಲಿಕ್ ಮತ್ತು ಆಂಗ್ಲ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಿಂದಗಿ ಮಾನ್ಯ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ, ಅಲಮೇಲ ತಾಲೂಕಿನ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅದ್ಯಕ್ಷ ಅಶೋಕ ಕೋಳಾರಿ ಅವರ ಸಮ್ಮುಖದಲ್ಲಿ ಸಂಗೀತ ಪದವೀಧರ ಡಾ.ಪ್ರಕಾಶ ಮೂಡಲಗಿ ರಾಗರಂಜಿನಿ, ಹಾಗೂ ಪೂಜಾ ಹಿರೇಮಠ ಮನವಿ ಸಲ್ಲಿಸಿದ್ದರು ಎಂದು ನವ ಕರ್ನಾಟಕ ಸಂಗೀತ ಪದವೀಧರ ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಶಾಸ್ತ್ರಿ ಸುಂಟನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

