ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಅಂದು ನಾರಿಮಣಿಗಳಿಗೆ ಗಗನ ಕುಸಮವಾಗಿದ್ದ ಶಿಕ್ಷಣ ವಿದ್ಯಾಭ್ಯಾಸಕ್ಕೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರೇರಿಪಿಸಿದ್ದಾರೆ. ಹೆಣ್ಣು ಕುಲಕ್ಕೆ ಧೈರ್ಯದಿಂದ ಅಕ್ಷರ ಕಲಿಕಾ ಮುನ್ನುಡಿ ಬರೆದಿರುವ ದಿಟ್ಟತನದ ಸಾಧಕಿ ಪುಲೆ ಅವರು ಪುರುಷ ಪ್ರಧಾನ ಸಮಾಜದಲ್ಲಿ ಎದೆಗುಂದದೆ ಮಾನವೀಯತೆ ನೆಲೆಗಟ್ಟಿನ ಮೇಲೆ ಶಿಕ್ಷಣದ ಪ್ರೀತಿಧಾರೆ ತೋರಿದ್ದಾರೆ. ಸಾವಿತ್ರಿಬಾಯಿ ಅವರ ಅಚಲ ಛಲದಿಂದಲೇ ವಿದ್ಯೆ ಮೌಲ್ಯ, ಶಿಕ್ಷಣದ ಕಂಪು ಇಂದು ಹೆಣ್ಣು ಮಕ್ಕಳು ಪಡೆಯುವಂತಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.
ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಪ್ರಯುಕ್ತ ಸಾಧಕಿ ಪುಲೆ ಹಾಗೂ ವೈಚಾರಿಕ ಸಂತ ಲಿಂ,ತೋಂಟದ ಡಾ,ಸಿದ್ದಲಿಂಗ ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರು ಸೀಮಿತವಾಗಿದ್ದ ಕಾಲದಲ್ಲಿ ನವಕ್ರಾಂತಿ, ಭ್ರಾಂತಿಯನ್ನು ಶಿಕ್ಷಣದ ಮೂಲಕ ಸಾವಿತ್ರಿಬಾಯಿ ಪುಲೆ ಸೃಜೀಸಿದ್ದಾರೆ. ಮಹಿಳಾ ಸಾಕ್ಷರತೆಗೆ ನವಭಾಷ್ಪ ಬರೆದು ಸಾಕಾರತೆ ಮೆರೆದಿದ್ದಾರೆ. ವೀರನಾರಿ ಪುಲೆ ನಿಜಕ್ಕೂ ಭಾರತೀಯ ಅಕ್ಷರಮ್ಮ ಎಂದರು.
ವಿದ್ಯೆ ಮೌಲ್ಯ ಹೆಣ್ಣು ರಂಗಕ್ಕೆ ಸಾರ್ವತ್ರಿಕವಾಗಿ ಸಾವಿತ್ರಿಬಾಯಿ ಪುಲೆ ಕಂಪಿಸಿದ್ದಾರೆ. ಹೀಗಾಗಿ ವೈಚಾರಿಕ, ದಿಟ್ಟಭಾವದ ಜಗದ್ಗುರು ತೋಂಟದ ಲಿಂಗೈಕ್ಯ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರು ಸಾವಿತ್ರಿಬಾಯಿ ಪುಲೆ ಅವರ ಯಶೋಗಾಥೆ ಅಗಾಗ ಸ್ಮರಿಸುತ್ತಾ ಅಕ್ಷರ ಮಾತೆಯ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿ ಬಣ್ಣಿಸುತ್ತಿದ್ದರು ಎಂದು ಸ್ಮರಿಸಿದರು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿದರು.
ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಸಚೀನ ಹೆಬ್ಬಾಳ, ಜಿ.ಆರ್.ಜಾಧವ ಇತರರಿದ್ದರು.

