ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ಶಿಕ್ಷಕ ಸಂತೋಷ ಬಂಡೆ ಅವರ ಅವಳಿ ಹೆಣ್ಣುಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರ 5ನೇ ವರ್ಷದ ಜನ್ಮದಿನದ ನಿಮಿತ್ತ ನಾಗಠಾಣದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಅಕ್ಟೋಬರ್ 15, ರವಿವಾರ ಸಂಜೆ 5.15ಕ್ಕೆ ‘ಮೂಲ’ ಕಥಾ ಸಂಕಲನದ ಲೋಕಾರ್ಪಣೆ, ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ ಆಚರಣೆ, ವಿಶ್ವ ಕೈತೊಳೆಯುವ ದಿನ ಹಾಗೂ ಒಂದು ನೂರು ಸಸಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಕಾರ್ಯಕ್ರಮ ಉದ್ಘಾಟಿಸುವರು. ಇಂಡಿ ತಾಲೂಕಿನ ನಾದ ಕೆ ಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿದಂಬರ ಬಂಡಗರ ಅವರು ‘ಮೂಲ’ ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡುವರು. ವಿಜಯಪುರದ ಸಾಹಿತಿ ಸಂಗೀತಾ ಮಠಪತಿ ಕೃತಿ ಪರಿಚಯಿಸುವರು. ಹಿರಿಯರಾದ ಸುಭಾಷ ಬಂಡೆ ಅಧ್ಯಕ್ಷತೆ ವಹಿಸುವರು. ರಾಯಚೂರಿನ ಅಂಚೆ ಸಹಾಯಕ ರಾಮಣ್ಣ ವಾಲ್ಮೀಕಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ
ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಿಕ್ಷಕ ಸಂತೋಷ ಬಂಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.


