ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಿದ್ದೇಶ್ವರ ಶ್ರೀಗಳು ಜ್ಞಾನದ ಸುವಾಸನೆಯನ್ನು ಭಾರತ ದೇಶದಲ್ಲಿ ಇಷ್ಟೇ ಅಲ್ಲ, ಬೇರೆ ದೇಶಕ್ಕೂ ಹರಿವಿದ ದಿವ್ಯತೆಯ ಅನುಭಾವಿ ಎಂದು ಅಮೃತಾನಂದ ಶ್ರೀಗಳು ಹೇಳಿದರು,
ತಾಲೂಕಿನ ಶಿರಶ್ಯಾಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಜ್ಞಾನಯೋಗಿ ಶ್ರೀ ಸಿದ್ದೇಶ್ವರಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಲೋಟಗಿಯ ಸಂಗಮೇಶ್ವರ ಶ್ರೀಗಳು ಮಾತನಾಡಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಲೋಕದ ಸೂರ್ಯ, ಶ್ರೀಗಳು ಗಳಿಸಿದ ಜ್ಞಾನಕ್ಕೆ ಜಗತ್ತಿನ ಯಾವ ಸಿರಿ ಸಂಪತ್ತು ಸರಿ ಆಗುವದಿಲ್ಲ. ಅವರು ಯುಗಪುರುಷರು, ಅವರದು ಯಾವದೇ ಕುರುಹು ಇಲ್ಲ, ಸಮಾಧಿ ಇಲ್ಲ ಜ್ಞಾನವೇ ಅವರ ಕುರುಗು ಎಂದರು.
ರೋಡಗಿಯ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ, ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ ಸಾಮರಸ್ಯ ಉತ್ತಮ ಆಚಾರ ವಿಚಾರ ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿದ್ದು ಅವರ ಪ್ರವಚನ ಮನುಕುಲಕ್ಕೆ ದಾರಿದೀಪವಾಗಿದ್ದವು ಎಂದರು
ಧಾರವಾಡದ ಬಸವಾನಂದ ಶ್ರೀಗಳು ಮಾತನಾಡಿ, ಸತ್ಯ ದರ್ಶನಗಳ ಪಾರಂಪರಿಕ ಹಾದಿಯನ್ನು ಹುಟ್ಟು ಹಾಕಿ ಜನರನ್ನು ಆಧ್ಯಾತ್ಮಿಕತೆಯ ಕಡೆಗೆ ಪಯಣಿಸಲು ದಾರಿಯನ್ನು ನಿರ್ಮಿಸಿ ತಾವು ಸಹ ಆಧ್ಯಾತ್ಮಿಕತೆಯ ಮೇರು ಗಿರಿ ಏರಿದವರು ಸಿದ್ದೇಶ್ವರ ಶ್ರೀಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ವಹಿಸಿದರು.
ಶಿವಕುಮಾರ ಕೋಳಿ, ಅಣ್ಣಾರಾಯ ಬಿರಾದಾರ ಮಾತನಾಡಿದರು.
ಬಾಳು ಮುಳಜಿ, ಶ್ರೀಶೈಲ ಸಾವಕಾರ ಬಿರಾದಾರ, ಅಣ್ಣಾರಾಯ ಬಿರಾದಾರ, ರಾಮನಗೌಡ ಪಾಟೀಲ,ಮಲ್ಲಪ್ಪಮಾಸ್ತರ ಪಾಸೋಡಿ, ಸಿದ್ದುಗೌಡ ಪಾಟೀಲ, ನಾನಾಗೌಡ ಪಾಟೀಲ ಬೂದಿಹಾಳ, ಅಶೋಕ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಯಶವಂತ ತೆಲಗ, ಹಣಮಂತರಾಯಗೌಡ ಪಾಟೀಲ, ಭುಮಗೊಂಡ ಪಾಸೋಡಿ, ಶರಣು ಬಿರಾದಾರ, ಸುರೇಶ ಬಿರಾದಾರ, ಸೋಮಶೇಖರ ಲಬ್ಬಾ , ದರ್ಮರಾಜ ಕಲ್ಲೂರ, ಸಂಗಮೇಶ ದಿವಟಗಿ, ರಾಘವೇಂದ್ರ ತಡಲಗಿ, ಗುರುಪಾದ ಕೋಳಾರಿ ಮತ್ತಿತರಿದ್ದರು.
ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಮೆರವಣೆಗೆ ಮಲ್ಲಿಕಾರ್ಜುನ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನ ವರೆಗೆ ನಡೆಯಿತು.
ಸ್ಪಂದನಾ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

