ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹೆಮ್ಮೆಯ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಉದಾತ್ತ ರಾಜಕೀಯ ಚಿಂತನೆಗಳ ಮೂಲಕ ದೇಶದ ರಾಜಕೀಯ ರಂಗದಲ್ಲಿ ಅಜಾತಶತ್ರು ಎನಿಸಿದ್ದರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.
ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ( ಸ್ಮೃತಿದಿನ)ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮುಖ್ಯಸ್ಥರಾಗಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ಎರಡು ಬಾರಿ ಪ್ರಧಾನಿಯಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ಕೀರ್ತಿ ವಾಜಪೇಯಿ ಅವರದ್ದಾಗಿದೆ ಎಂದರು.
ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ(ಕೆರೂಟಗಿ) ಹಾಗೂ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ವಾಜಪೇಯಿ ಲೋಕಸಭೆಗೆ ಒಂಬತ್ತು ಬಾರಿ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಮಹಾನ್ ಮುತ್ಸದ್ಧಿ ಎಂದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡ್ಡಮನಿ, ಮಹಾಂತೇಶ ಬಿರಾದಾರ, ಸೋಮಶೇಖರ ಹಿರೇಮಠ, ಸಿದ್ರಾಮಯ್ಯ ಮಠ (ಸಾತಿಹಾಳ), ಪಿಂಟೂ ಭಾಸುತ್ಕರ್, ಕಲ್ಮೇಶ ಬುದ್ನಿ, ಶಿವರಾಜ ತಳವಾರ, ಶ್ರೀಮಂತ ತಳವಾರ (ನಿವಾಳಖೇಡ), ವಿಠ್ಠಲ ಯಂಕಂಚಿ(ಬಮ್ಮನಜೋಗಿ), ಆಕಾಶ ಕಬ್ಬಿನ, ಗುರುನಾಥ ಮುರುಡಿ (ಪಡಗಾನೂರ), ಶರಣು ಪೂಜಾರಿ, ಜಗದೀಶ ಚವ್ಹಾಣ, ರೇವಣಸಿದ್ಧ ದಿಂಡವಾರ, ಯಲ್ಲು ಬಾವೂರ ಇದ್ದರು.

