ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಪ್ರದೇಶ ಕುರುಬ ಸಂಘದ ನೂತನ ಅಧ್ಯಕ್ಷರಾಗಿ ಮೋರಟಗಿ ಗ್ರಾಮದ ಸಿದ್ದು ಕೆರಿಗೊಂಡ ಅವರನ್ನು ಆಯ್ಕೆ ಮಾಡಿ ಸಮಾಜದ ಹಿರಿಯರು ಹಾಗೂ ಯುವಕರು ಸನ್ಮಾನಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಹಾಲುಮತ ಸಮಾಜದ ಹಿರಿಯರಿಗೆ ಹಾಗೂ ಯುವಕರಿಗೆ ಕರೆ ನೀಡಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಹಿರಿಯರ ಒಪ್ಪಿಗೆ ಮೇಲೆ ಅಧ್ಯಕ್ಷರಾಗಿ ಸಿದ್ದು ಕೆರಿಗೊಂಡ, ಉಪಾಧ್ಯಕ್ಷರಾಗಿ ಚಂದ್ರಮ ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕಟ್ಟಿಮನಿ, ಸಹ ಕಾರ್ಯದರ್ಶಿಯಾಗಿ ಸಂಗಪ್ಪ ಪೂಜಾರಿ, ಖಜಾಂಚಿಯಾಗಿ ಸೋಮು ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಪೂಜಾರಿ, ನಿರ್ದೇಶಕರುಗಳಾಗಿ ಸಿದ್ದು ಪೂಜಾರಿ ಕಾಶಿರಾಮ ಬಿರಾದಾರ, ಅಶೋಕ ಪೂಜಾರಿ, ಸಂತೋಷ ಪೂಜಾರಿ, ಕನ್ನಯ್ಯ ಪೂಜಾರಿ, ಹಾವಣ್ಣ ಹಿರೇಹಾವಳಗಿ, ಮಾಳಪ್ಪ ಪೂಜಾರಿ, ರಾಜು ಪೂಜಾರಿ, ಭೀಮಾಶಂಕರ ಪೂಜಾರಿ, ಅವರನ್ನು ಆಯ್ಕೆ ಮಾಡಿದ್ದಾರೆ.
ನಂತರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮುಖಂಡ ರಮೇಶ ಭಂಟನೂರ ಮಾತನಾಡಿ, ಇಂದಿನ ರಾಜಕೀಯ ನಾಯಕರುಗಳು ನಮ್ಮ ಸಮುದಾಯವನ್ನು ಉಪಯೋಗಿಸ್ಕೊಂಡು ನಮ್ಮನ್ನು ವಡೆದಾಳುತ್ತಿದ್ದಾರೆ ವಿಷ ಕೊಟ್ಟವರಿಗೆ ಹಾಲುಣಿಸುವ ಮುಗ್ದ ಸಮಾಜ ನಮ್ಮದು. ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಅಧ್ಯಕ್ಷರು ಎಲ್ಲ ಪದಾಧಿಕಾರಿಗಳು ಶ್ರಮಿಸಬೇಕು ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಮುದಾಯ ಸಾಕಷ್ಟು ಮೂಲಭೂತ ಸೌಕರ್ಯದಿಂದ ವಂಚಿತರಗಿದ್ದಾರೆ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸರಕಾರದ ಯೋಜನೆಗಳನ್ನು ವದಗಿಸಲು ಹೋರಾಟ ಮಾಡುವ ಕಾರ್ಯ ನಿಮ್ಮಿಂದಾಗಬೇಕು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾಬೀತು ಪಡಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಇರುವ ಸಣ್ಣ ಪುಟ್ಟ ಬಿರುಕುಗಳನ್ನು ಸರಿಪಡಿಸುವ ಕೆಲಸವಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಹಿರಿಯರು ಯುವಕರು ಸಂಘದ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.

