ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳದಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐ ಹಾಗೂ ಉದ್ಯೋಗ ವಿನಿಮಯ ಕಚೇರಿ, ಕೌಶಾಲ್ಯಾಭಿವ್ಯದ್ಧಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಈ ಪ್ರಧಾನಮಂತ್ರಿ ರಾಷ್ಟೀಯ ಶಿಶಿಕ್ಷು ಮೇಳವನ್ನು ವಿಜಯಪುರ ಸರಕಾರಿ ಐಟಿಐ ಪ್ರಾಚಾರ್ಯ ರಮೇಶ ದೇಸಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಐಟಿಐ ತರಬೇತಿ ಪೂರ್ಣಗೊಳಿಸಿದರೆ ಸಾಲದು. ಕೈಗಾರಿಕೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ ತರಬೇತಿಯನ್ನು ಕೈಗಾರಿಕೆಗಳಲ್ಲಿ ಮುಗಿಸಿ ಸಂಪೂರ್ಣ ಕೌಶಲ್ಯ ಹೊಂದಬೇಕು ಎಂದು ಹೇಳಿದರು.
ಒಟ್ಟು 650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಅಪ್ರೆಂಟಿಸ್ ಮೇಳದಲ್ಲಿ ಅದರಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 20 ನಾನಾ ಕಂಪನಿಗಳಗೆ ಆಯ್ಕೆಯಾದರು.
ಜಿಲ್ಲಾ ನೋಡಲ್ ಅಧಿಕಾರಿ ರಂಗು ಮುಂಜೆ, ಉಪಪ್ರಾಚಾರ್ಯೆ ಶಗುಪ್ತಾ ಮಲ್ಲಾಡಕರ, ಖಾಸಗಿ ಐಟಿಐಗಳ ಸಂಘದ ಅಧಕ್ಷ ಎಸ್. ಎಂ. ನೆರಬೆಂಚಿ, ಪ್ರಾಚಾರ್ಯೆ ಎಂ. ಡಿ. ಪಡಸಲಗಿ, ಎಚ. .ಎ. ಎಲ್ ಕಂಪನಿಯ ಮ್ಯಾನೇಜರ ಚಂದ್ರಲಾಂಬಿಕೆ, ಸಿಇಒ ಅನಿಲಕುಮಾರ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಉದ್ಯೋಗ ವಿನಿಮಯ ಮತ್ತು ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹೇಶ ಮಾಲವಾಡೇಕರ ಅಧ್ಯಕ್ಷತೆ ವಹಿಸಿದ್ದರು. ಶಿಶಿಕ್ಷು ಮೇಳದ ನೋಡಲ್ ಅಧಿಕಾರಿ ಪೂಜಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಗಂಗಾಧರಮಠ ಸ್ವಾಗತಿಸಿದರು. ಆನಂದ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ನೂರಂದಯ್ಯ ಮಠಪತಿ ವಂದಿಸಿದರು.

