ಉದಯರಶ್ಮಿ ದಿನಪತ್ರಿಕೆ
ಚಡಚಣ: ದಿನಾಲು ಸಾವಿರಾರು ವಿದ್ಯಾರ್ಥಿಗಳು, ನೂರಾರು ಅಧಿಕಾರಿಗಳು, ಹಿರಿಯರು, ಸಾರ್ವಜನಿಕರು ಹಲವಾರು ಗ್ರಾಮಗಳಿಂದ ಬಂದು ಇಂಡಿ ಮತ್ತು ಚಡಚಣ ತಿರುಗಾಡುವದು ಇಲ್ಲಿನ ಅನಿವಾರ್ಯ, ಕಾರಣ ಇಂಡಿ ಮತ್ತು ಚಡಚಣ ತಾಲೂಕಾ ಕೇಂದ್ರಗಳಾಗಿದ್ದು ಹಲವಾರು ಕೆಲಸಕ್ಕೆ ರೈತರು, ಸಾರ್ವಜನಿಕರು ಬಸ್ಸಿಗಾಗಿ ಕಾದು, ಕಾದು ಬೇಸತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷರು ಪ್ರಕಾಶ ಬಿರಾದಾರ ಆಕ್ರೋಶ ಹೊರಹಾಕಿದ್ದಾರೆ.
ಇಂಡಿ, ಚಡಚಣ ಮತ್ತು ವಿಜಯಪುರ, ಸೋಲಾಪುರ್ ಮಧ್ಯದಲ್ಲಿರುವ ಝಳಕಿ ಬಸ್ಸ ನಿಲ್ದಾಣಕ್ಕೆ, ಬಸ್ಸಿಗಾಗಿ ಜನರು ಪರಡುವ ಪರಿಸ್ಥಿತಿ ಎದುರಾಗಿದೆ ಎಂದು ಝಳಕಿ ವಲಯದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಾ ಅಧ್ಯಕ್ಷ ಪ್ರಕಾಶ ಬಿರಾದಾರ್ ಹಾಗೂ ಝಳಕಿ ಅಧ್ಯಕ್ಷ ರವಿಕುಮಾರ್ ಹೂಗಾರ ನೇತೃತ್ವದಲ್ಲಿ ಇಂದು ಝಳಕಿ ಬಸ್ಸ ನಿಲ್ದಾಣದ ವಿಭಾಗೀಯ ಕಂಟ್ರೋಲರ್ ರುದ್ರು ಗಜಾಕೋಶ್ ಇವರ ಮೂಲಕ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲದವರೆಗೆ ಬಸ್ಸಿಗಾಗಿ ಬಡವರು, ನೀರಿದ್ಯೋಗಿಗಳು ಇಂಡಿ ಮತ್ತು ಚಡಚಣಕ್ಕೆ ಬಸ್ಸಿನ ಮೇಲೆ ಅವಲಂಬಿತಾರಾಗಿದ್ದು, ಸಮಯಕ್ಕೆ ಬಾರದ ಸರ್ಕಾರಿ ಬಸ್ಸ, ಜೀಪ್, ಟೆಂಪೋ, ಇನ್ನಿತರೆ ಪ್ರವೇಟ್ ವಾಹನಗಳಲ್ಲಿ ತಿರುಗಾಡುವ ತಾಕತ್ತು ಬಡವರಿಗಿಲ್ಲ, ಈ ವಿಷಯ ಸರ್ಕಾರಕ್ಕೂ ಮತ್ತು ಸರ್ಕಾರಿ ಅಧಿಕಾರಿಗಳಿಗೂ ತಿಳಿದ ವಿಷಯ, ಹೀಗಿದ್ದಾಗ, ಸರಿಯಾದ ಸಮಯದಲ್ಲಿ ಬಾರದ ಬಸ್ಸಿಗಾಗಿ ಕಾದು ಕುಳಿತು ಜನರು ಬೀಸಾತ್ತಿದ್ದಾರೆ, ಬಡವರ ಜೀವನಕ್ಕೆ ಸ್ಪಂದಿಸದ ಇಂತಹ ಸರ್ಕಾರ, ಸರ್ಕಾರಿ ಅಧಿಕಾರಿಗಳು ಯಾರಿಗೆ ಬೇಕು, ಕೂಡಲೆ ಇಂಡಿ ಮತ್ತು ಚಡಚಣ ಮಧ್ಯ ಸಮಯಕ್ಕೆ ಅನುಸರವಾಗಿ ಬಸ್ಸಗಳ ವ್ಯವಸ್ಥೆ ಮಾಡದೇ ಹೋದಲ್ಲಿ ಇಂಡಿ ಮತ್ತು ಚಡಚಣ ಮಾರ್ಗದಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಚನಗೊಂಡ ಬಿರಾದಾರ್, ಕಾರ್ತಿಕ್ ಪಟ್ಟಣಶೆಟ್ಟಿ, ಪ್ರವೀಣ ಬಡಿಗೇರ್, ಬಸು ವಾಲಿಕಾರ, ಬಾಲಕೃಷ್ಣ ಭೋಸಲೇ, ಉಮೇಶ್ ಕಾರ್ಕಲ, ಅಮಸಿದ್ದ ಧಾಳೇ, ಹೇಮಂತ್ ಹಾಡಸಂಗೆ, ಮೋಹನ್ ಕಾಪಸೆ, ಶಿವರಾಜ್ ಆಕಳವಾಡಿ, ಸಂಜಯ್ ಬಿಸೆ, ಸತೀಶ್ ಬಗಲಿ, ಚಂದುಗೌಡ ಪಾಟೀಲ ಉಪಸ್ಥಿತರಿದ್ದರು.

