ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಭಾರತ ರತ್ನ, ಮಾಜಿ ಪ್ರಧಾನಮಂತ್ರಿ, ಮಹಾನ್ ರಾಷ್ಟ್ರನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಅತ್ಯಂತ ಶ್ರದ್ಧೆ ಹಾಗೂ ಗೌರವದಿಂದ ಆಚರಿಸಲಾಯಿತು.
ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದಿ.ಅಟಲ್ ಬಿಹಾರಿ ವಾಜಪೇಯಿ ಸಮೃದ್ಧ ಭಾರತ ನಿರ್ಮಾಣದ ದಿವ್ಯ ಕನಸು ಹೊಂದಿದ್ದ ಶ್ರೇಷ್ಠ ನಾಯಕ, ಭವ್ಯ ಭಾರತ ಕಟ್ಟುವ ಅದಮ್ಯ ಉದ್ದೇಶ ಹೊಂದಿದ್ದ ಅವರು ತಮ್ಮ ಅವಧಿಯಲ್ಲಿ ಅನೇಕ ಮಹೋನ್ನತ ಯೋಜನೆಗಳನ್ನು ರೂಪಿಸಿದರು, ಸರ್ವ ಶಿಕ್ಷಣ ಅಭಿಯಾನದಂತಹ ಶ್ರೇಷ್ಠ ಕಾರ್ಯಕ್ರಮಗಳನ್ನು ರೂಪಿಸಿದರು, ಅವರ ಆಡಳಿತ ಅವಧಿಯು ಒಂದು ಸುವರ್ಣ ಯುಗ, ಅವರೊಬ್ಬ ಶ್ರೇಷ್ಠ ಮಾನವೀಯ ಅಂತ:ಕರಣಿ, ಸ್ವತ: ಕವಿಯಾಗಿದ್ದ ಅವರು ಸಾಹಿತ್ಯಕ್ಕೂ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.ದೇಶದ ಭದ್ರತೆ, ಆರ್ಥಿಕ ಸ್ಥಿರತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿದೇಶಾಂಗ ನೀತಿಯಲ್ಲಿ ಅವರು ಮಾಡಿದ ಸಾಧನೆಗಳು ಇಂದಿಗೂ ಮಾದರಿಯಾಗಿವೆ. ಸುವರ್ಣ ಚತುರ್ಭುಜ ಹೆದ್ದಾರಿ ಯೋಜನೆ, ಗ್ರಾಮೀಣ ರಸ್ತೆ ಸಂಪರ್ಕ, ಅಣುಶಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಹೀಗೆ ಅವರು ನೀಡಿದ ಕೊಡುಗೆಗಳು ಅಜರಾಮರ ಇವೆಲ್ಲವೂ ಅವರ ದೂರದೃಷ್ಟಿಯ ಫಲವಾಗಿದೆ. ಅವರ ತತ್ವ, ಆದರ್ಶ ಮತ್ತು ಸುಶಾಸನ ಪರಿಕಲ್ಪನೆ ಇಂದಿನ ಯುವ ಪೀಳಿಗೆಗೆ ದಾರಿದೀಪ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು ನಾಯಕರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಎಲ್ಲರ ಗೌರವ ಪಡೆದ ಅಪರೂಪದ ನಾಯಕರು. ಪೋಖ್ರಾನ್ ಅಣುಪರೀಕ್ಷೆ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ಸಾರಿದವರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೃಢ ನಾಯಕತ್ವ ಪ್ರದರ್ಶಿಸಿ ದೇಶದ ಗೌರವವನ್ನು ಎತ್ತರಕ್ಕೆತ್ತಿದವರು ಅಟಲ್ ಜಿ. ಅವರ ನಾಯಕತ್ವ ಮತ್ತು ರಾಷ್ಟ್ರಭಕ್ತಿ ಇಂದಿನ ನಾಯಕರಿಗೆ ಮಾರ್ಗದರ್ಶಕ ಎಂದರು.
ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ,ಅಟಲ್ ಬಿಹಾರಿ ವಾಜಪೇಯಿ ಅವರು ಸಂಘಟನಾ ಚಾತುರ್ಯದಲ್ಲಿ ಅಪಾರ ಪರಿಣತಿ ಹೊಂದಿದ್ದರು. ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಅವರ ಶ್ರಮವೇ ಇಂದು ಭಾರತೀಯ ಜನತಾ ಪಕ್ಷ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವುದಕ್ಕೆ ಕಾರಣ. ಕಾರ್ಯಕರ್ತರ ಮೇಲೆ ಅವರ ವಿಶ್ವಾಸ, ಸರಳತೆ ಮತ್ತು ಶಿಸ್ತಿನ ಜೀವನ ಎಲ್ಲರಿಗೂ ಪ್ರೇರಣೆ ಎಂದರು.
ಡಾ.ಸುರೇಶ್ ಬಿರಾದಾರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸ್ವಪ್ನಾ ಕಣಮುಚನಾಳ, ಸುಮಿತ್ರಾ ಜಾಧವ, ಉಮೇಶ್ ಕೊಳಕೂರ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಭೀಮಾಶಂಕರ ಹದನೂರ, ರಾಜೇಶ್ ತಾವಸೆ, ಮಲ್ಲು ಕಲಾದಗಿ, ರವಿಕಾಂತ ಬಗಲಿ, ಶ್ರೀವಿಠ್ಠಲ ಹೊಸಪೇಟ, ಮಲ್ಲಮ್ಮ ಜೋಗೂರ, ಚಿನ್ನು ಚಿನಗುಂಡಿ ಸಂತೋಷ್ ನಿಂಬರಗಿ ಶೇಖರ್ ಬಾಗಲಕೋಟ್ ವಿಕಾಸ್ ಪದಕೀ ಗಣೇಶ್ ಉಪ್ಪಾರ್ ಅಪ್ಪು ಕುಂಬಾರ್ ಸದಾಶಿವ್ ಪೂಜಾರಿ ಗಣೇಶ ರಣದೇವಿ ಉಮೇಶ್ ವಿರ್ಕರ್ ಸಂಗಮೇಶ್ ಉಕ್ಕಲಿ ವಿನಾಯಕ ದಹಿಂಡೆ ಸಿದ್ದು ಮಲ್ಲಿಕಾರ್ಜುನ ಮಠ ರಾಮಚಂದ್ರ ಚವಾನ್ ವಿಜಯ್ ಹಿರೇಮಠ ಪ್ರಫುಲ್ ಪವಾರ್ ಗೀಸುಧರಾಜ ಇನಾಮ್ದಾರ್ ಭಾರತಿ ಭುಯ್ಯಾರ, ಶರಣಬಸು ಕುಂಬಾರ, ರಾಘವೇಂದ್ರ ಕಾಫ್ಸೆ ಅಶೋಕ ರಾಠೋಡ ಮಯೂರ ಮೊರಗಾವಕರ, ವಿವೇಕ ತಾವರಗೇರಿ, ಪ್ರಜ್ವಲ ದೇಸಾಯಿ ಜಯಶ್ರೀ ಅಫಜಲಪುರ
ಬಸಮ್ಮ ಗಜರಿ
ಶುಷಮಾ ಹಡಪದ. ಸೇರಿದಂತೆ ನೂರಾರು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

