ದೇವರಹಿಪ್ಪರಗಿ: ವಿಜಯಪುರದಲ್ಲಿ ಅಗಸ್ತ್ಯ ಫೌಂಡೇಷನ್ ಹಾಗೂ ಶಾಲಾಶಿಕ್ಷಣ, ಸಾಕ್ಷರತಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಾಹಿತಿ ತಂತ್ರಜ್ಞಾನ ಕುರಿತಾದ ರಸಪ್ರಶ್ನೆ (ಐಟಿ ಕ್ವಿಜ್) ಕಾರ್ಯಕ್ರಮದಲ್ಲಿ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಹೈಸ್ಕೂಲಿನ ವಿದ್ಯಾರ್ಥಿ ಸಾತ್ವಿಕ್ ಜನಗೊಂಡ ಸ್ಪರ್ಧಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಉಪಪ್ರಾಂಶುಪಾಲ ಎಮ್.ಕೆ.ಕುಡಚಿ, ಗಣಿತ ಶಿಕ್ಷಕ ಎಮ್.ಎಚ್.ಬಗಲಿ ಸೇರಿದಂತೆ ಸಿಬ್ಬಂದಿವರ್ಗ, ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Posts
Add A Comment