ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ರೈತರಿಗೆ ಬರಗಾಲ ಪರಿಹಾರ, ಸಾಲಮನ್ನಾ, ಬೆಳೆವಿಮೆ, ಜಾನುವಾರಗಳಿಗೆ ಮೇವು ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಉಪತಹಶೀಲ್ದಾರ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಗುರುವಾರ ಆಗಮಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ರೈತಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಹಾಗೂ ರೈತರ ಸಾಲಮನ್ನಾ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ತಾಲ್ಲೂಕಿನ ಎಲ್ಲ ರೈತರು ಪಾದಯಾತ್ರೆಯ ಮೂಲಕ ಆಗಮಿಸಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಈರಪ್ಪ ಕುಳೇಕುಮಟಗಿ, ಗೌರವಾಧ್ಯಕ್ಷ ಶಿವಾನಂದ ಹಿರೇಮಠ, ಸಂಪತ್ ಕುಮಾರ ಜಮಾದಾರ, ಸಂಗಮೇಶ ಹುಣಸಗಿ, ಗುರಣ್ಣ ಹಂಗರಗಿ, ಮಲ್ಲನಗೌಡ ಬಿರಾದಾರ, ಲಕ್ಕಪ್ಪ ಹೂಗಾರ, ಮಲ್ಲಪ್ಪ ಸುಂಬಡ, ಹಣಮಂತ್ರಾಯಗೌಡ ಪಾಟೀಲ, ಸುಭಾಸ್ ಸಜ್ಜನ, ದ್ಯಾವಪ್ಪಗೌಡ ಪಾಟೀಲ, ಅಪ್ಪಾಸಾಹೇಬ ಹರವಾಳ, ಮಲ್ಲಿಕಾರ್ಜುನ ಪಾಟೀಲ, ಸಿದ್ಧನಗೌಡ ಬಿರಾದಾರ, ಸಿ.ಎಸ್.ಪ್ಯಾಟಿ, ಭೀಮನಗೌಡ ಬಿರಾದಾರ ಇದ್ದರು.
Related Posts
Add A Comment