ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ತಪ್ಪದೇ ಹಾಕಿಸಿ ಎಂದು ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಕರೆ ನೀಡಿದರು.
ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಲಿಯೋ ಹನಿ ಮಗುವಿನ ಬೆಳವಣಿಗೆಗೆ ಬಹಳ ಮಹತ್ವ. ಎಲ್ಲ ಪಾಲಕರು ತಮ್ಮ ಕೆಲಸಗಳನ್ನು ಬದಿಗೊತ್ತಿ ಮಕ್ಕಳ ಆರೋಗ್ಯದ ಹಾಗೂ ದೇಹದ ಸದೃಢತೆಗಾಗಿ ಪಲ್ಸ್ ಪೊಲೀಯೊ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದರು.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಈಳಗೇರ, ಬಸಮ್ಮ ಸೋಮನಾಳ, ಸಾವಿತ್ರಿ, ಅಶಾ ಕಾರ್ಯಕರ್ತೆಯರಾದ ನೀಲಮ್ಮ ಪಾಟೀಲ, ಸುಮಂಗಲಾ ಹಿರೇಮಠ, ಶಿವಲೀಲಾ ಪತ್ತಾರ, ಅಂಗನವಾಡಿ ಸಹಾಯಕಿರಾದ ಗೌರಮ್ಮ ನಾಲತವಾಡ, ಶಾಂಭವಿ ಪಾಟೀಲ, ಕವಿತಾ ಸೋಮನಾಳ ಸೇರಿದಂತೆ ಪಾಲಕರು ಮಕ್ಕಳು ಇದ್ದರು.

