ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾತಿಹಾಳ ಗ್ರಾಮದಿಂದ ರಬಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ಕಾರಿ ರಸ್ತೆ ಮಾರ್ಗವನ್ನು ಸರಿಪಡಿಸಲು ಆಗ್ರಹಿಸಿ ಸಾತಿಹಾಳ ಗ್ರಾಮಸ್ಥರು ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ತೆರಳಿದ ಸಾತಿಹಾಳ ಗ್ರಾಮಸ್ಥರು ರಸ್ತೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರವಿ ಬೂದಗೂಳಿ ಮಾತನಾಡಿ, ನಮ್ಮ ಗ್ರಾಮದಿಂದ ರಬಿನಾಳಕ್ಕೆ ಸಂಪರ್ಕಿಸುವ ರಸ್ತೆ ಇದು ಗ್ರಾಮದ ಜಮೀನುಗಳಿಗೂ ಸಹ ತೆರಳುವ ರಸ್ತೆಯಾಗಿದೆ. ಈ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು ಇದರ ಸುಧಾರಣೆಗಾಗಿ ರೈತರೆಲ್ಲರೂ ಸೇರಿ ರಿಪೇರಿಯ ಕ್ರಮವಹಿಸಿದ್ದು ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಜಮೀನು ಹೊಂದಿರುವ ಸ.ನಂ ೨೩೬ ಹಾಗೂ ಸ.ನಂ೩೫೨ ರ ರೈತರು ಆಕ್ಷೇಪಿಸಿ ರಸ್ತೆ ಸುಧಾರಣೆಗೆ ಅವಕಾಶ ನೀಡುತ್ತಿಲ್ಲ. ಇದರಿಂದ ರೈತರು ತಾವು ಬೆಳೆದ ಬೆಳೆ ಕಠಾವು ಮಾಡದೇ ಇದ್ದು ಬೆಳೆ ಹಾಳಾಗುವ ಹಂತದಲ್ಲಿವೆ. ಆದ್ದರಿಂದ ತಹಶೀಲ್ದಾರ ತಾವೇ ಮಧ್ಯೆ ಪ್ರವೇಶಿಸಿ ನಮ್ಮ ಜಮೀನುಗಳಿಗೆ ತೆರಳುವ ರಸ್ತೆ ದೊರಕಿಸಿ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಲು ಆಗ್ರಹಿಸಿ ನಂತರ ಮನವಿ ಸಲ್ಲಿಸಿದರು.
ಕೋನಪ್ಪಗೌಡ ಪಾಟೀಲ, ಶಾಂತಪ್ಪ ದೇವೂರ, ಆಸೀಫ್ ಕನ್ನೋಳ್ಳಿ, ಹಣಮಂತ್ರಾಯಗೌಡ ಬಿರಾದಾರ, ಅಷ್ಪಾಕ್ ಕನ್ನೋಳ್ಳಿ, ಲಕ್ಕಪ್ಪ ಮಾದರ, ಬಸವರಾಜ ಚಳಗೇರಿ, ಮಡ್ಡೆಪ್ಪ ಸಜ್ಜನ ಇದ್ದರು.

