ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಶಾಖಾ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಎಫ್-೧೩ ಕಲ್ಯಾಣ ನಗರ ಮಾರ್ಗದ ಮೇಲೆ ಬರುವ ಕೋರ್ಟ್ ಸುತ್ತಮುತ್ತಲಿನ ಪ್ರದೇಶ , ಡಾಲ್ಫಿನ್ ದಾಬಾ, ಪ್ರೇರಣಾ ಶಾಲೆ, ದೊಡಮನಿ, ಮನಗೂಳಿ ಮತ್ತು ಬಿ.ಟಿ.ಸುಣಗಾರ ಅವರ ಕಡಿಮಿಷನ್ ಪ್ರದೇಶಗಳಲ್ಲಿ ಡಿ.೨೩ರಂದು ಬೆಳಿಗ್ಗೆ ೧೦ಗಂಟೆಯಿಂದ ಸಾಯಂಕಾಲ ೫ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
