ಚಿರತೆ ಮನುಷ್ಯರನ್ನು ಕೊಲ್ಲಬಹುದೆಂಬ ಆತಂಕದಲ್ಲಿ ತದ್ದೇವಾಡಿ ಗ್ರಾಮಸ್ಥರು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ತದ್ದೇವಾಡಿ ಗ್ರಾಮದ ಜನರಲ್ಲಿ ಆತಂಕದ ವಾತವಾರಣ ಸೃಷ್ಠಿಯಾಗಿದೆ.
ಈ ಮೊದಲು ಚಿರತೆ ದಾಳಿಯಿಂದ ಜಾನುವಾರು ಸಾವನಪ್ಪಿದ ಘಟನೆ ನಡೆದು ಒಂದು ವಾರದಲ್ಲಿಯೆ ಎರಡನೆಯ ಬಾರಿ ಮತ್ತೆ ಚಿರತೆ ದಾಳಿಯಿಂದ ಮತ್ತೊಂದು ಜಾನುವಾರ ಕಳೆದುಕೊಂಡ ಘಟನೆ ರವಿವಾರ ನಡೆದಿದೆ.
ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದಾದ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಮತ್ತು ಮನುಷ್ಯರ ಮೇಲೂ ದಾಳಿ ಮಾಡಬಹುದು ಎಂದು ಈ ಭಾಗದ ಗ್ರಾಮಸ್ಥಗಳು ಆತಂಕಕ್ಕೊಳಗಾಗಿದ್ದಾರೆ.
ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ಜನ ಭಯಭೀತರಾಗಿದ್ದಾರೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಮತ್ತು ಪತ್ರಿಕೆಗಳಲ್ಲಿಯು ಪ್ರಕಟವಾಗಿದೆ ಆದರೂ ಇಲ್ಲಿಯವರಗೆ ಚಿರತೆ ಪತ್ತೆಯಾಗಿಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಮತ್ತು ನಮ್ಮ ಜೀವ ಕೈಯಲ್ಲಿ ಹಿಡಿದು ತಿರುಗುವಂತೆ ಆಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು. ಇಲ್ಲಿಯವರೆಗೆ ಚಿರತೆ ದಾಳಿಯಿಂದ ಸತ್ತ ಜಾನುವಾರ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಉಪಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.
“ ಚಿರತೆ ಪತ್ತೆಗೆ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ತದ್ದೇವಾಡಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪತ್ತೆ ಹಚ್ಚಲು ಡ್ರೂನ್ ಕ್ಯಾಮೆರಾ ಕಾರ್ಯಾಚರಣೆ ನಡೆದಿದೆ. ಆದಷ್ಟು ಬೇಗ ಚಿರತೆ ಪತ್ತೆ ಹಚ್ಚಲಾಗುವುದು. ಹಾನಿಯಾದ ಜಾನುವಾರಗಳಿಗೆ ಪರಿಹಾರ ನೀಡಲಾಗುವುದು.
– ಎಸ್. ಜಿ. ಸಂಗಲಕ
ಅರಣ್ಯಾಧಿಕಾರಿ, ಇಂಡಿ

