ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆರೋಗ್ಯ ಕವಚ ೧೦೮ ವಾಹನ ಚಾಲಕ (ಪೈಲೆಟ್) ತಾಳಿಕೋಟಿ ದಯಾನಂದ ಬಸಪ್ಪ ಸಾಸನೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಭೀಮ್ ಸರಕಾರ ಸಂಘಟನಾ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೀಮ ಸರಕಾರ್ ಸಂಘಟನೆ ಪದಾಧಿಕಾರಿಗಳು, ಜಿಲ್ಲೆಯ ತಾಳಿಕೋಟಿ ಪಟ್ಟಣದ ಆರೋಗ್ಯ ಕವಚ ೧೦೮ ಅಂಬುಲೇನ್ಸ್ ಚಾಲಕ (ಪೈಲೆಟ್) ದಯಾನಂದ ಬಸಪ್ಪ ಸಾಸನೂರ ಇವರು ಬೆಂಗಳೂರಿನ ಇ.ಎಮ್.ಆರ್.ಐ ಗ್ರೀನ್ ಹೆಲ್ತ ಸರ್ವಿಸ್ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಕರ್ತವ್ಯದಲ್ಲಿ ಕಿಂಚಿತು ಶೃದ್ಧೆ ಇಲ್ಲದೆ ತನ್ನ ಮೇಲಾಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಅವರನ್ನ ಮೇಲಿಂದ ಮೇಲೆ ಬ್ಯಾಕಮೇಲ್ ಮಾಡುತ್ತ ತನಗೆ ಲಾಭದಾಯಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿಗಳ ಮಧ್ಯ ದಲ್ಲಾಳಿಯಾಗಿ ವರ್ಗಾವಣೆ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಗಿಂಬಳ ಪಡೆದುಕೊಳ್ಳುತ್ತಿದ್ದಾನೆ. ಅಧಿಕಾರಿಗಳನ್ನು ಅಂಜಿಸಿ ಹಾಜರಾತಿ ಹಾಕಿಸಿ ವೇತನವನ್ನು ಪಡೆದುಕೊಳ್ಳುತ್ತಾನೆ.
ಈ ಹಿಂದೆ ೩ ತಿಂಗಳ ಸತತ ಗೈರು ಇದ್ದ ಈತ ಪ್ರತಿ ತಿಂಗಳ ಸಂಬಳ ಪಡೆಯುತ್ತಾನೆ. ಈ ಬಗ್ಗೆ ನಮ್ಮ ಭೀಮ್ ಸರಕಾರ ಸಂಘಟನಾ ಸಮಿತಿ ದಿ.೧೭-೦೯-೨೦೨೫ ರಂದು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪರಿಣಾಮ ಬೀರಿಲ್ಲ. ಇವನನ್ನು ರಕ್ಷಿಸುತ್ತಿರುವ ಈ ಅಧಿಕಾರಿಗಳು ಈ ದಯಾನಂದ ಬಸಪ್ಪ ಸಾಸನೂರ ಮೇಲೆ ಸೂಕ್ತ ಕ್ರಮ ಕೈಗೊಂಡು ವಜಾ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮ್ ಸರಕಾರ ಸಂಘಟನಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ, ಜಿಲ್ಲಾ ಕಾರ್ಯದರ್ಶಿ ಅನೀಲ ಬೋರಗಿ, ಶಂಕರ ಬಜಂತ್ರಿ, ಕಿಟ್ಟು ಬನ್ನೂರ, ಅಪ್ಪು ಹೆಂಡೆಗಾರ, ಅಜಯ ಬೋರಗಿ, ಸುನೀಲ ಬೋರಗಿ, ಸುನೀಲ ಚಲವಾದಿ, ಸೋಮು ಹಟ್ಟಿ, ಮಾರುತಿ ಬೂದಿಹಾಳ, ಸಂಪತಕುಮಾರ ಹೊಸಳ್ಳಿ, ದೀಪು ಕಾಂಬಳೆ ಇದ್ದರು.

