ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ.
ಗ್ರಾಮೀಣ ಸೊಗಡಿನ ಹಬ್ಬದಂದು ಅನ್ನದಾತರು ಬನ್ನಿ ಗಿಡದ ಬುಡದಲ್ಲಿ ಪಂಚ ಪಾಂಡವರನ್ನು ಪ್ರತಿಷ್ಠಿಾಪಿಸಿಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಯ ಋಣ ತೀರಿಸುವ ಸಲುವಾಗಿ ಜೋಳದ ಕನಿಕೆಯಿಂದ ಕೊಂಪೆ ಕಟ್ಟಿ, ಸೀರೆ ಉಡಿಸಿ ಉಡಿ ತುಂಬಿ , ಪೂಜೆ ಸಲ್ಲಿಸಿ, ಕರ್ಪೂರ ಬೆಳಗಿ ಕಾಯಿ ಹೊಡೆದು ಭೂತಾಯಿಯ ಮಡಿಲ್ಲಲ್ಲಿ ಚರಗ ಚೆಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಈ ಶುಭ ಸಂದರ್ಭದಲ್ಲಿ ಬಂಧು ಬಾಂಧವರು, ಆತ್ಮೀಯ ಸಹೋದ್ಯೋಗಿ ಮಿತ್ರರು ಒಂದಾಗಿ ಸೇರಿ ಹಬ್ಬದ ಸವಿ ರುಚಿ ಎಳ್ಳು ಹಚ್ಚಿದ ಸಜ್ಜಿ ರೋಟಿ, ಸಜ್ಜಿ ಕಡುಬು, ಪುಂಡಿ ಪಲ್ಲೆ, ಇಂಡಿ ಪಲ್ಯ , ಭರ್ತ, ಭಜ್ಜಿ, ಅಪ್ಪಳ, ಸೆಂಡಗೆ, ಅಂಬಲಿ, ಹೋಳಿಗೆ, ಅನ್ನ ಸಾರು, ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸುತ್ತಾರೆ.
ಈ ಪವಿತ್ರ ದಿನ ನಾಡಿನ ಸಮಸ್ತ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸುಖ ಸಂತೋಷ ನೆಮ್ಮದಿ ಸಮೃದ್ಧಿ, ಸಂಪತ್ತು, ಕೊಟ್ಟು ಕರುಣಿಸಲಿ ಎನ್ನುತ್ತಾರೆ ರೈತಾಪಿ ವರ್ಗ.

