ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹೆಣ್ಣು ಮಗಳು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಎಲ್ಲಾ ನಾನಾ ರೀತಿಯ ರೂಪಗಳಲ್ಲಿ ತನ್ನ ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜೀವನವನ್ನು ಮುನ್ನಡೆಸುತ್ತಿದ್ದಾಳೆ ಎಂದು ನಿವೃತ್ತ ಶಿಕ್ಷಕಿ ಶೇಕವ್ವ ಶಾವೀರ್ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಡಪಟ್ಟಿ ಗ್ರಾಮದ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಲ ಕಡಪಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಭಾರತೀಯ ಅನೇಕ ಮಹಿಳೆಯರು ಇತಿಹಾಸವನ್ನು ನಿರ್ಮಿಸಿದ್ದಾರೆ ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರು ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಮಹಾದೇವಿ ವಚನಗಳು ಅಜರಾಮರವಾಗಿವೆ ಇವುಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ, ನಮ್ಮ ಜೀವನದಲ್ಲಿ ಯಾವ ರೀತಿಯಾಗಿರಬೇಕೆಂದು ವಚನಗಳು ನಮಗೆ ತಿಳಿಸಿಕೊಡುತ್ತವೆ,ಈ ಎಲ್ಲ ಮಹಿಳೆಯರೂ ನಮಗೆ ಸ್ಫೂರ್ತಿ ,ಎಲ್ಲ ಕ್ಷೇತ್ರದಲ್ಲಿ ಮಹಿಳೆ ಮುಂದೆ ಬರಬೇಕೆಂದು ಹೇಳಿದರು.
ಶಿಕ್ಷಕರಾದ ಬಸವರಾಜ್ ಲಕ್ಷ್ಮೇಶ್ವರ ಮಾತನಾಡಿ, ನಾವು ಏನು ಬೇಕಾದರೂ ಮಾಡಿದರು ಅದನ್ನು ತದೆದುಕೊಂಡಿರುವ ಸಹನಾ ಮೂರ್ತಿಯೆ ತಾಯಿ,ಒಬ್ಬ ಹೆಣ್ಣು ಮಗಳು, ತಂದೆ ತಾಯಿಗಳಿಗೆ ಮಗಳಾಗಿ, ಅತ್ತೆ ಮಾವನಿಗೆ ಸೊಸೆಯಾಗಿ, ಗಂಡನಿಗೆ ಹೆಂಡತಿಯಾಗಿ, ಮಕ್ಕಳಿಗೆ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ, ನಮ್ಮ ಮನುಷ್ಯ ಜೀವನದಲ್ಲಿ ಹೊಂದಾಣಿಕೆಯು ಬಹಳ ಕಡಿಮೆಯಾಗಿದೆ, ಮಾನವೀಯತೆಯ ಗುಣಗಳು, ಮೌಲ್ಯಗಳು ಮರೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಮಹಾನಿಂಗ ರಾಮದುರ್ಗ, ಗುರುಪಾದ ರಾವಳೋಜಿ, ಬಸವರಾಜ್ ಮಾಳಿ, ಸಿದ್ಲಿಂಗಪ್ಪ ಮಾಳಿ, ಶಿವಾನಂದ್ ಕಲ್ಯಾಣಿ ಇದ್ದರು.ರಾಖಿ ರಾವಳೋಜಿ, ವಿಜಯಲಕ್ಷ್ಮಿ ರಾವಳೋಜಿ,ವಿದ್ಯಾಶ್ರೀ ಬೆಳಗಲಿ, ಸಂಗೀತಾ ಮಾಳಿ, ಸಾವಿತ್ರಿ ರಾವಳೋಜಿ, ರೂಪಾ ರಾವಳೋಜಿ , ರೂಪಾ ಜಂಬಗಿ,ಸುಜಾತಾ ಕುಂಚನೂರು,ಜಯಶ್ರೀ ಮಾಳಿ, ಶಿವಲೀಲಾ ಬೆಳಗಲಿ, ಜ್ಯೋತಿ ಜಾಲಿಬೇರಿ, ಕಾವ್ಯ ಜಾಲಿಬೇರಿ, ಶ್ವೇತಾ ಜಂಬಗಿ ಸೇರಿದಂತೆ ಅನೇಕ ಮಹಿಳೆಯರು,ತಾಯಂದಿರು ಭಾಗವಹಿಸಿದ್ದರು.

