ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದಲ್ಲಿ ಬಣ್ಣದ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕ ಯುವತಿಯರು, ಚಿಣ್ಣರು ಬಣ್ಣದೋಕುಳಿಯಲ್ಲಿFCC ಮಿಂದೆದ್ದಿದ್ದರು. ಹೋಳಿಯಾಟದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್ಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.
ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಹೋಳಿ ಹುಣ್ಣಿಮೆಯ 5ನೇ ದಿನ ರವಿವಾರದಂದು ಪಟ್ಟಣದಲ್ಲಿ ಅಲ್ಲಲ್ಲಿ ರೇನ್ ಡ್ಯಾನ್ಸ್ ಹಾಗೂ ಡಿಜೆ ಸೌಂಡ್ ಎರ್ಪಡಿಸಿದ್ದರು. ಡಿಜೆ. ಸೌಂಡ್ಗೆ ಮಹಿಳೆಯರು, ಯುವತಿಯರು, ಯುವಕರು ಹೆಜ್ಜೆ ಹಾಕಿ, ನೃತ್ಯ ಮಾಡಿ ಬಣ್ಣದ ಹಬ್ಬದ ಉತ್ಸಾಹ ಹೆಚ್ಚಿಸಿದರು. ಪಟ್ಟಣದಾದ್ಯಂತ ಹೋಳಿ ಸಂಭ್ರಮ ಜೋರಾಗಿತ್ತು. ರಂಗಿನಾಟದಲ್ಲಿ ಮಿಂದೆದ್ದ ಯುವಕ ಯುವತಿಯರು, ಪರಸ್ಪರ ಬಣ್ಣ ಎರಚಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿದ ದೃಶ್ಯ ಪಟ್ಟಣದಾದ್ಯಂತ ಕಂಡು ಬಂದಿತು.
ಬಣ್ಣದಾಟದ ದಿನ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಸಿ.ಪಿ.ಐ. ಪರಶುರಾಮ ಮನಗೂಳಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿತ್ತು.
ಚಡಚಣ ಮರಡಿಯಲ್ಲಿ ಮಹಿಳೆಯರು ರಂಗ ಪಂಚಮಿ ಆಚರಣೆಯನ್ನು ಮಾಡಿದರೂ.ರಮೇಶ ಮಲ್ಲಾಡಿ ಸರ್ ಮನೆಯ ಮುಂದೆ ಸುಮಂಗಲಾ ಕೋರೆ
ಪೂನಮ ಮಲ್ಲಾಡಿ , ರೇಷ್ಮಾ ರೆವೆ, ಮಹಾನಂದ ಮಠಪತಿ, ವಿಜಯಲಕ್ಮಿ ಚೋಳಕೆ, ಶಶಿಕಲಾ ಆಜೂರ್, ಸುಮಂಗಲ ಕನ್ನೊರ, ವಿರಾಟ್ ಸಾಮ್ರಾಟ್ ಒಬ್ಬರಿ ಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸಿದರು

