ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ರವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾಷನಲ್ ಹೆರಾಲ್ಡ (ಯಂಗ ಇಂಡಿಯಾ) ಪ್ರಕರಣದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪಿ.ಜೆ.ಪಿ. ನಾಯಕರು ಪಿತೂರಿ ಮಾಡುತ್ತಿರುವ ಕಾನೂನು ಬಾಹಿರ ಪ್ರಕರಣ ಎಂಬುದಾಗಿ ಸಾಬೀತ ಆದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ರವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ಜರುಗಿಸಲಾಯಿತು. ಹೊಟೇಲ್ ಗೋದಾವರಿ ಎದುರಿಗೆ ಇರುವ ಡಾ. ಬಾಬು ಜಗಜೀವನರಾಂ ವೃತ್ತದಿಂದ ವಿಜಯಪುರ ಜಿಲ್ಲಾ ಬಿ.ಜೆ.ಪಿ. ಕಚೇರಿವರೆಗೆ ತೆರಳಿ ಕಛೇರಿಯನ್ನು ಮುತ್ತಿಗೆ ಹಾಕಿ ಬಿಜೆಪಿ ಪಕ್ಷದ ವಿರುದ್ಧ ಹೋರಾಟ ಮಾಡಿ ದಿಕ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮಾತನಾಡುತ್ತಾ, ನ್ಯಾಷನಲ್ ಹೆರಾಲ್ಡ (ಯಂಗ ಇಂಡಿಯಾ) ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ವಿರುದ್ಧ ದುರುದ್ದೇಶದಿಂದ ಕೇಂದ್ರ ಬಿ.ಜೆ.ಪಿ. ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿದೆ. ದೆಹಲಿಯ ನ್ಯಾಯಾಲಯವು ಈ ಪ್ರಕರಣವು ವಜಾಗೊಳಿಸಿದೆ. ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಬಿ.ಜೆ.ಪಿ.ಯು ನಡೆಸುತ್ತಿರುವ ಪ್ರತೀಕಾರ ರಾಜಕಾರಣ ಹಾಗೂ ತನಿಖಾ ಸಂಸ್ಥೆಗಳ ದುರುಪಯೋಗವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರು ಹಾಗೂ ವಿಜಯಪುರ ಕಾಂಗ್ರೆಸ್ ನಾಯಕರಾದ ಅಬ್ದುಲ್‌ಹಮೀದ ಮುಶ್ರೀಫ್ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದರಫೀಕ ಟಪಾಲ, ಸೋಮನಾಥ ಕಳ್ಳಿಮನಿ, ಸಂಗಮೇಶ ಬಬಲೇಶ್ವರ, ಗಂಗಾಧರ ಸಂಬಣ್ಣಿ, ದಿನೇಶ ಹಳ್ಳಿ, ಕನ್ನಾನ ಮುಶ್ರೀಫ, ಉಸ್ಮಾನ ಪಟೇಲ, ಜಕ್ಕಪ್ಪ ಯಡವೆ, ಆಸೀಫ ಶಾನವಾಲೆ, ಕೈಸರ ಇನಾಮದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಮಹಾದೇವಿ ಗೋಕಾಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಮೀರ ಅಹ್ಮದ ಬಕ್ಷಿ, ಆರತಿ ಶಾಹಪೂರ, ರಫೀಕ ಪಕಾಳೆ, ಗುರುನಾಥ ತಾರನಾಳ, ಬಿ. ಸಿ. ಸಾಹುಕಾರ, ಬಶೀರ ಶೇಠ, ಬಿ. ಎಸ್. ಪಾಟೀಲ, ಮಹಿಳಾ ಅಧ್ಯಕ್ಷರಾದ ರಮೇಜಾ ನದಾಫ, ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಮೋಯಿನ್ ಶೇಖ, ಹನೀಫ ಮಕಾಂದಾರ, ರಮೇಶ ಗುಬ್ಬೇವಾಡ, ಶಕೀಲ ಬಾಗಮಾರೆ, ಪೀರಾ ಜಮಖಂಡಿ, ಸರ್ಫರಾಜ ಮಿರ್ದೆ, ಎಂ. ಬಿ. ಮೆಂಡೆಗಾರ, ಬೀರಪ್ಪ ಜಉಮನಾಳ, ಫಯಾಜ ಕಲಾದಗಿ, ಅವಿನಾಶ ಹೇರಲಗಿ, ಸತೀಶ ಅಡವಿ, ಪರಶುರಾಮ ಹೊಸಮನಿ, ಸಂತೋಷ ಬಾಲಗಾವಿ, ಬಿ. ಎಮ್ ಮುಕ್ಬಿಲ್, ಸಾಜಿದ ರಿಸಾಲದಾರ, ಎಸ್. ಎಂ. ಕಾಜಿ, ಹಾಜಿ ಪಿಂಜಾರ, ಮಹಾದೇವ ರಾಠೋಡ, ಅಕಬರ ನಾಯಿಕ, ಫರೋಜ ಶೇಖ, ಅಲ್ಲಾಬಕ್ಷ ಮುಲ್ಲಾ, ಬಾಬು ಯಾಳವಾರ, ಇಲಿಯಾಸ ಸಿದ್ದೀಕಿ, ಮಹಾದೇವ ರಾವಜಿ, ಅಹಮದ ಮುಲ್ಲಾ, ಭುವನೇಶ್ವರಿ ಮಠ, ಪ್ರೇಮಾ ಬ್ಯಾಕೋಡ, ಅನುಸೂಯಾ ನಿಂಬರಗಿ, ಮಹಾಂತಯ್ಯ ಹಿರೇಮಠ, ಮಂಜುಳಾ ಗಾಯಕವಾಡ, ಹಮೀದಾ ಪಟೇಲ, ಅಬೂಬಕರ ಕಂಬಾಗಿ, ಲಕ್ಷ್ಮಣ ಚಲವಾದಿ, ಮಂಜುನಾಥ ನಿಡೋಣಿ ಹಾಗೂ ಇತರ ಜಿಲ್ಲಾ ಹಾಗೂ ತಾಲೂಕ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. .

