ಉದಯರಶ್ಮಿ ದಿನಪತ್ರಿಕೆ
ಇಂಡಿ: ವ್ಯವಸಾಯ ಮಾಡುವ ರೈತರಿಗೆ ಹೆಚ್ಚಿನ ಆದಾಯ ಬೇಕು ಎಂದರೆ ಕುರಿ ಮೇಕೆ ಸಾಕಾಣಿಕೆ ಒಳ್ಳೆಯ ಆಯ್ಕೆ. ರೈತರು ಮಾತ್ರವಲ್ಲ ಸಾಮಾನ್ಯ ಜನರು ಕೂಡ ಕುರಿ ಸಾಗಾಣಿಕೆ ಮಾಡಬಹುದು. ಇದರಿಂದ ಲಾಭ ಕೂಡ ಚೆನ್ನಾಗಿ ಬರುತ್ತದೆ. ಆದರೆ ಯಾವ ತಳಿಯ ಕುರಿ ಆಯ್ಕೆ ಮಾಡಬೇಕು ಎಂಬುದು ಬಹಳ ಮುಖ್ಯ ಎಂದು ನಬಾರ್ಡ ಪ್ರಬಂದಕ ವಿಕಾಸ ರಾಠೋಡ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ದೇವರ ನಿಂಬರಗಿ ಗ್ರಾಮದ ೩೦ ಮಹಿಳೆಯರಿಗೆ ಮಹಿಳಾ ಗುಂಪುಗಳಿಗೆ ಕುರಿ ಸಾಗಾಣಿಕೆ ಕುರಿತು ಸಾಲ ಸೌಲಭ್ಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರಿ ಗಳಿಗೆ ಔಷದೋಪಚಾರ, ಆಹಾರ, ಬೆಳವಣೆಗೆ ಮತ್ತು ಮಾರುಕಟ್ಟೆ ಕುರಿತು ಮಾತನಾಡಿದರು.
ನಬಾರ್ಡದ ಕಾರ್ಯದರ್ಶಿ ಸಿ.ಆರ್.ಡಿ ಎಸ್ ಜಿ.ಎಂ ಬಿರಾದಾರ ಮಾತನಾಡಿ, ಕುರಿ ಸಾಗಾಣಿಕೆಯಲ್ಲಿ ಉಸ್ಮಾನಾಬಾದಿ ತಳಿ ಆಯ್ಕೆ ಮಾಡಿದರೆ ಅಥವಾ ಉತ್ತಮ ತಳಿ ಆಯ್ಕೆ ಮಾಡಿದರೆ ಇವುಗಳ ಮೌಂಸಕ್ಕೆ ಹೆಚ್ಚು ಬೇಡಿಕೆ ಇದೆ ಎಂದರು.
ವಿಜ್ಞಾನಿಗಳಾದ ಪ್ರಸಾದ, ಡಾ. ಪ್ರಕಾಶ, ಡಾ. ವೀಣಾ ಚಂದಾವರಿ, ಮಾಜೀದ ಮತ್ತು ಮಂಜುಳಾ ಮಾತನಾಡಿದರು.
ದೇವರ ನಿಂಬರಗಿಯ ೩೦ ಮಹಿಳೆಯರು ತರಬೇತಿಯಲ್ಲಿ ಉಸ್ಥಿತರಿದ್ದರು.

