ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಸಕ್ತ ಸಾಲಿನ ತೋಟಗಾರಿಕೆ ಮೇಳವನ್ನು ಡಿ. ೨೧ರಿಂದ ೨೩ರವರೆಗೆ ಆಯೋಜಿಸಲಾಗಿದೆ. ಮೌಲ್ಯವರ್ಧನೆ ಹಾಗೂ ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳ ನಡೆಯಲಿದ್ದು, ಜಿಲ್ಲೆಯ ರೈತರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: ೧೮೦೦-೪೨೫-೭೯೧೦ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
