ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ, ಸಿಂದಗಿ.
ಶಾಖೆಯ ವತಿಯಿಂದ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಹೆಚ್ಚುತ್ತಿರುವ ಚಳಿಯನ್ನು ಗಮನದಲ್ಲಿಟ್ಟುಕೊಂಡು, ವೃದ್ಧರು ಮತ್ತು ಅಸಹಾಯಕರನ್ನು ಹಾಗೂ ಅತ್ಯಂತ ಬಡ ಕುಟುಂಬದ ಜನರಗೆ ಚಳಿಯಿಂದ ರಕ್ಷಿಸಿಕೊಳ್ಳಲು ಬುಧವಾರ ಕಂಬಳಿಗಳನ್ನು ವಿತರಿಸಲಾಯಿತು.
ಈ ವೇಳೆ ಎನ್.ಕೆ.ಚೌದರಿ ಗುರುಗಳು ವೇದಿಕೆ ಉದ್ದೇಶ ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿ, ವೇದಿಕೆ ಯಾವುದೆ ಜಾತಿ ಭೇದ ಮತ-ಪಂಥ ಅನ್ನದೆ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯ ಸಂದೇಶ ಸಾರುತ್ತಿದೆ. ಎರಡು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಬ್ಯಾಗ್, ನೋಟ ಪುಸ್ತಕ ಕೊಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಿದೆ. ಇಂದು ನಾವು ಎಲ್ಲರೂ ಸಹಾಯದ ಭಾವನೆ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೌಲಾನಾ ದಾವುದ ನದ್ವಿ ಮಾತನಾಡಿ, ಮಾನವನಿಗೆ ಮಾನವನೆ ಪರಿಹಾರ. ಆದ ಕಾರಣ ನಾವು ಎಲ್ಲರೂ ಒಗ್ಗಟ್ಟಿನಿಂದ ಬಾಳುವುದು ಬಹಳ ಮುಖ್ಯ. ಸುಂದರ ಸಮಾಜದ ನಿರ್ಮಾಣ ಪರಸ್ಪರ ಸಹಕಾರ ಸಹಾಯದಿಂದ ಸಾದ್ಯ. ಮಾನವೀಯ ಮೌಲ್ಯಗಳು ಅಳವಡಿಸಿಕೊಳ್ಳುವದು ಅತ್ಯಗತ್ಯ. ಸುಭದ್ರ ದೇಶದ ನಿರ್ಮಾಣ ಪ್ರೀತಿ ವಿಶ್ವಾಸ ಸಹೋದರತೆ ಹಾಗೂ ಒಳ್ಳೆಯ ಮನೋಭಾವದಿಂದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರಿಶೈಲಗೌಡ. ಶರಣಗೌಡ, ಮೌ.ಕಲೀಮುಲ್ಲಾ, ಮೌ.ಅಬುಹುರೈರಾ ಪಯ್ಯಾಜ ಮಂದೆವಾಲಿ ಹಾಗೂ ಊರಿನ ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

