ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಿಲ್ಲೆಯ ಇಬ್ಬರು ಸಚಿವರು ಮತ್ತು ಶಾಸಕರು ಪಕ್ಷಾತೀತವಾಗಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹರೀಶ ಎಂಟಮಾನ ಆಗ್ರಹಿಸಿದರು.
ಮಂಗಳವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಜಯಪುರ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಖಾಸಗೀಕರಣ ಕೈಬಿಟ್ಟು ಸರಕಾರಿ ವೈದ್ಯಕೀಯ ಕಾಲೇಜಾಗಿಯೆ ಪ್ರಾರಂಭಿಸಬೇಕು ಎಂದು ಕಳೆದ 90 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಅವರ ಹೋರಾಟಕ್ಕೆ ಜಿಲ್ಲೆಯ ವಿವಿದ ಸಂಘಟನೆಗಳು ಬೆಂಬಲಿಸಿವೆ. ಹಾಗೆ ವಿವಿಧ ಸಂಘಟನೆಗಳಿಂದ ವಿನೂತನವಾಗಿ ಜಿಲ್ಲೆಯಾದ್ಯಂತ ಹೊರಾಟ ಮಾಡಿದ್ದು ಇದೆಲ್ಲವನ್ನು ಮನಗಂಡಂತ ಜಿಲ್ಲೆಯ ಸಚಿವರು, ಶಾಸಕರು ಹೋರಾಟಕ್ಕೆ ಬೆಂಬಲಿಸಿ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಇನ್ನೋರ್ವ ಸಚಿವರಾದ ಶಿವಾನಂದ ಪಾಟೀಲ ಮತ್ತು ವಿಜಯಪುರ ನಗರ ಶಾಕ ಬಸನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಸರಕಾರಕ್ಕೆ ಒತ್ತಾಯಿಸಿ ಸರಕಾರಿ ವೈದ್ಯಕೀಯ ಕಾಲೇಜು ಆರಂಬಿಸಬೇಕು. ಒಂದು ವೇಳೆ ನಿಷ್ಕಾಳಜಿ ತೋರಿದರೆ ಜಿಲ್ಲೆಯ ಸಚಿವರು ಶಾಸಕರು ಹಾಗೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ನಿಜವಾಗಲೂ ಸರಕಾರಕ್ಕೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಬಡ ಜನರ ಮೇಲೆ ಕಾಳಜಿ ಇದ್ದರೆ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಬಿಸಲು ಮುಂದಾಗಬೇಕು ಎಂದು ಹೇಳಿದರು.

