ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ರವಿವಾರ ತಡರಾತ್ರಿ ಯುವ ಕಳ್ಳರು 8 ಮನೆಗಳಿಗೆ ನುಗ್ಗಿ ಸರಣಿ ಗಳ್ಳತನ ನಡೆಸಿ, ಓಮಿನಿ ವ್ಯಾನ ವಾಹನದಲ್ಲಿ ಪರಾರಿಯಾದ್ದಾರೆ ಎಂದು ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ತಿಳಿಸಿದರು.
ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ 1:30 ರಿಂದ 2:30 ರ ಸಮಯದಲ್ಲಿ ಸುಮಾರು 8 ಮನೆಗಳ ಬೀಗ ಒಡೆದಿದ್ದಾರೆ, ಗ್ರಾಮದ ಸಿ. ಸಿ ಕ್ಯಾಮರಾ ಒಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿ ಮಾರಕಾಸ್ತ್ರಗಳೊಂದಿಗೆ ರಸ್ತೆಯಲ್ಲಿ ತಿರುಗಾಡುವ ದೃಶ್ಯ ಕಂಡುಬಂದಿದೆ, ಆದರೆ ಸರಿಯಾದ ಸಾಕ್ಷಿಗಳು ಮತ್ತು ಪುರಾವೇಗಳನ್ನು ಕಲೆ ಹಾಕಲು ಪೋಲಿಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಬಳ್ಳೊಳ್ಳಿ ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ,
ಮನೆಯಲ್ಲಿ ಇಲ್ಲದ ಸಮಯ ನೋಡಿ,ದುಡಿಯಲು ಹೊಗಿರುವವರ ಮನೆಯ ಚಿಲಕ ಮುರಿದು ಕಳ್ಳತನ ಮಾಡಿರುವದರಿಂದ ಕಳ್ಳತನದಲ್ಲಿ ಖಚಿತವಾಗಿ ಇಂತಿಷ್ಠೆ ಹಣ, ಒಡವೆ, ಸಾಮಾನುಗಳು ಕಳ್ಳತನವಾಗಿವೆ ಎಂದು ಸರಿಯಾದ ಮಾಹಿತಿ ದೊರೆತಿಲ್ಲ ಕಳ್ಳತನವಾದ ದುಡಿಯಲು ಹೋದ ಮನೆಯ ಮಾಲೀಕರು ಬಂದು ಹೇಳಿದನಂತರವಷ್ಟೆ ಸರಿಯಾದ ಮಾಹಿತಿ ತಿಳಿಯುವದು ಎಂದು ಠಾಣಾಧಿಕಾರಿ ಮಂಜುನಾಥ ತೀರಕನ್ನವರ ತಿಳಿಸಿದ್ದಾರೆ. ಆದರೂ ತನಿಖೆ ನಡೆಸಿ ಕಳ್ಳರನ್ನು ಶೀಘ್ರದಲ್ಲಿಯೆ ಬಂಧಿಸಲಾಗುವದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ ವಾಲಿ, ಹಜರತ ಮುಲ್ಲಾ, ಶರಣಯ್ಯ ಮಠಪತಿ, ಜಂಜುರ್ಡೇ, ಶಿವಲಿಂಗ ತುಪ್ಪದ ಪ್ರವೀಣ ಬಡಿಗೇರ, ಉಸ್ಮಾನ್ ಪಠಾಣ, ಅಪ್ಪಾಶ್ಯಾ ವಾಲಿಕಾರ, ಸದಾಶಿವ ವಾಲಿಕಾರ ಹಾಗೂ ಗ್ರಾಮಸ್ಥರು ತಮ್ಮ ಸಿ. ಸಿ. ಕ್ಯಾಮರಾ ಮತ್ತು ಹಲವಾರು ಮಾಹಿತಿ ನೀಡಿ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಿದರು.

