ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಾವು ಕಲಿತ ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ₹ 50 ಸಾವಿರ ದೇಣಿಗೆ ಚಿಕ್ ನೀಡಿದ್ದಾರೆ.
ಶಾಲೆಯ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಜಂಟಿ ಖಾತೆಗೆ ಸ್ಥಿರ ಠೇವಣಿಯಾಗಿ (ಎಪ್ ಡಿ) ಇಡಲು ಮುಖ್ಯಗುರುಗಳು ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷರಿಗೆ ಚೆಕ್ ನೀಡಿದರು.
ಶಾಲೆಯ ಜಂಟಿ ಖಾತೆಯಲ್ಲಿ ಇಟ್ಟ ಸ್ಥಿರ ಠೇವಣಿಯಿಂದ ಪ್ರತಿ ವರ್ಷ ಬರುವ ಬಡ್ಡಿ ಹಣವನ್ನು ಶಾಲೆಯ ಪ್ರತಿ ವರ್ಷದ ವಾರ್ಷಿಕ ಪರೀಕ್ಷೇಯಲ್ಲಿ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಧನ ಸಹಾಯ ಮಾಡಲು ಈ ಠೇವಣಿ ಹಣ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಗುರುಮಾತೆ ಜಿ.ಎ.ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಮೆಳ್ಳಿಗೇರಿ, ಬಾಬು ಛಲವಾದಿ, ಎಚ್. ಎಚ್. ಇಂಗಳಗಿ, ಸಿಆರ್ಪಿ ಶಿವು ಕಾಂಬಳೆ ಹಾಜರಿದ್ದರು.
ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ನೀಡಿದ ಪ್ರೋತ್ಸಾಹಕ್ಕೆ ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ಚವ್ಹಾಣ, ಶಾಲಾ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

