ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ನಮ್ಮ ಮಕ್ಕಳಧಾಮದ ವಿದ್ಯಾರ್ಥಿ ಮಣಿಕಂಠ ಕಡಕೋಳ ಅಂಡರ್-೧೯, ಟಿ-೨೦ ಕ್ರಿಕೆಟ್ ಚಾಂಪಿಯನ್‌ಶಿಪ್-೨೦೨೫ಕ್ಕಾಗಿ ಕರ್ನಾಟಕ ರಾಜ್ಯ ತಂಡಕ್ಕೆ ಅಯ್ಕೆಯಾಗಿದ್ದಾನೆ.
ಸರ್ದಾರ್ ವಲ್ಲಭಭಾಯಿ ಪಟೇಲ ಅಖಿಲ ಭಾರತ ಅಂತರರಾಜ್ಯ ಟಿ-೨೦ ಕ್ರಿಕೆಟ್ ಚಾಂಪಿಯನ್‌ಶಿಪ್- ೨೦೨೫ನ್ನು ಗುಜರಾತ ಕ್ರಿಕೆಟ್ ಮಂಡಳಿ ಹಾಗೂ ಡಿಸಿಸಿಎನ್ ನವಸಾರಿ ಆಯೋಜಿಸುತ್ತಿದೆ.
ವಿದ್ಯಾರ್ಥಿ ಆಯ್ಕೆಗೆ ಮಕ್ಕಳಪರ ಚಿಂತಕ ವಾಸುದೇವ ತೋಳಬಂದಿ, ಉಜ್ವಲ ಸಂಸ್ಥೆ ನಿರ್ದೇಶಕಿ ಸುನಂದಾ ತೋಳಬಂದಿ, ಧಾಮದ ಮುಖ್ಯಶಿಕ್ಷಕ ರಾವುತ ಮರಬಿ ತರಬೇತುದಾರ ಶ್ರೀಕಾಂತ ಕಾಖಂಡಕಿ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

